ರೈಲ್ವೆ ಇಲಾಖೆಯಲ್ಲಿ ಇಂಜಿನಿಯರ್‌ ಪದವಿಧರರಿಗಾಗಿ ನೇಮಕಾತಿ ಪ್ರಾರಂಭ

ಸೋಮವಾರ, 16 ಜೂನ್ 2014 (15:44 IST)
ಭಾರತ ಸರ್ಕಾರದ ರೈಲ್ವೆ ಇಲಾಖೆಯ ಸೆಂಟರ್‌‌ ಫಾರ್‌ ರೈಲ್ವೆ ಇನ್ಫಾರ್ಮೆಶನ್‌ ಸಿಸ್ಟಮ್‌‌‌‌(ಸಿಆರ್‌‌ಐಎಸ್‌) ನಲ್ಲಿ ಅಸಿಸ್ಟೆಂಟ್‌ ಇಂಜಿನಿಯರ್‌‌ ಹುದ್ದೆಗಳಿಗಾಗಿ ಅರ್ಜಿ ಕರೆಯಲಾಗಿದೆ. ಅಸಿಸ್ಟೆಂಟ್‌‌ ಸಾಫ್ಟವೇರ್‌ ಇಂಜಿನಿಯರ್‌ ಮತ್ತು ಅಸಿಸ್ಟೆಂಟ್‌‌ ನೆಟವರ್ಕ್‌ ಇಂಜಿನಿಯರ್‌‌ ಈ ಎರಡು ಹುದ್ದೆಗಳಿಗಾಗಿ ಅರ್ಜಿಯನ್ನು ಕರೆಯಲಾಗಿದೆ. ಎಸ್‌‌ಎಸ್‌‌‌‌ಇಗಾಗಿ 40 ಹುದ್ದೆಗಳು ಮತ್ತು ಎಎನ್‌‌ಇಗಾಗಿ 15 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ರೆಜಿಸ್ಟ್ರೆಶನ್‌‌ ಜೂನ್‌‌ 16,2014 ರಿಂದ ಪ್ರಾರಂಭವಾಗುವುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜುಲೈ 6, 2014. 
 
ವಯೋಮಿತಿ: 
ಎರಡು ಹುದ್ದೆಗಳಿಗೆ ಅರ್ಜಿಸಲ್ಲಿಸುವವರ ವಯೋಮಿತಿ ಕನಿಷ್ಠ 22 ಮತ್ತು ಗರಿಷ್ಠ 27. ಎಸ್‌‌‌ಸಿ, ಎಸ್‌‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ ಮತ್ತು ಓಬಿಸಿಯವರಿಗೆ 3 ವರ್ಷದ ಸಡಿಲಿಕೆ ಇದೆ. 
 
ವೇತನ: 9,300-34,800 ರೂಪಾಯಿಗಳು+ಗ್ರೆಡ್‌‌ಪೇ 4600+ಡಿಎ ಮತ್ತು ಇತರ ಭತ್ಯೆಗಳು. ಪ್ರಾರಂಬಿಕ ಮಾಸಿಕ ವೇತನ 35000 ರೂಪಾಯಿಗಳು. 

ನೇಮಕಾತಿ ವಿಧಾನ: 
ನೇಮಕಾತಿ GATE 20104 ಆಧಾರದ ಮೇಲೆ ನಡೆಸಲಾಗುವುದು. ಈ ಹುದ್ದೆಗಳು 5 ವರ್ಷದ ಒಪ್ಪಂದದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. 
 
ಅರ್ಜಿಸಲ್ಲಿಸುವ ವಿಧಾನ:  
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕೇವಲ ಆನ್‌‌ಲೈನ್‌‌‌‌ ಮೂಲಕ ಸಲ್ಲಿಸಬೇಕಾಗುತ್ತದೆ. 
ಮೊದಲ ಸುತ್ತಿನಲ್ಲಿ ಜುಲೈ 6 ರವರೆಗೆ ಅರ್ಜಿ ಸಲ್ಲಿಸಬಹುದು ಎರಡನೇ ಹಂತದ ಅರ್ಜಿ ಸಲ್ಲಿಸುವಿಕೆಯ ಕೊನೆಯ ದಿನಾಂಕ ಜುಲೈ 15. 
 
ಎಸ್‌‌ಬಿಐ ನಲ್ಲಿ ಅಪ್ಲಿಕೇಶನ್‌ ಮೊತ್ತ ಭರಿಸುವ ಕೊನೆಯ ದಿನಾಂಕ ಜುಲೈ 10. ಅರ್ಜಿ ಸಲ್ಲಿಸಲು ಮತ್ತು ಇತರ ಮಾಹಿತಿಗಾಗಿ ಈ ಕೆಳಗಡೆ ನೀಡಿದ ವೆಬ್‌‌ಸೆಟ್‌ ನೋಡಿ. 
http://www.crisrecruitment2014.org.in/
 
 
 

ವೆಬ್ದುನಿಯಾವನ್ನು ಓದಿ