ಮೋದಿಯನ್ನು ಸಮಸ್ಯೆ ನಿವಾರಿಸುವ ಮಾಂತ್ರಿಕನಂತೆ ಬಿಂಬಿಸಲಾಗ್ತಿದೆ: ಸೋನಿಯಾ ಟೀಕೆ

ಬುಧವಾರ, 9 ಏಪ್ರಿಲ್ 2014 (17:33 IST)
PR
PR
ಕೋಲಾರ: ನರೇಂದ್ರ ಮೋದಿ ದೇಶದ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಮಾಂತ್ರಿಕನಂತೆ ಬಿಂಬಿಸಲಾಗುತ್ತಿದ್ದು ಮುಖವಾಡದಿಂದ ಮುಚ್ಚಿಕೊಂಡ ನಿಜವಾದ ಮುಖವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ಕೋಲಾರದಲ್ಲಿ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡುತ್ತಿದ್ದ ಸೋನಿಯಾ,ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಟೀಕಿಸಿದರು. ಕೆಲವು ಜನರಿಗೆ ಸಣ್ಣ ವಿಷಯವನ್ನು ದೊಡ್ಡದು ಮಾಡಿ ಹೇಳುವ ಚಟವಿದೆ ಎಂದು ಲೇವಡಿ ಮಾಡಿದರು.

ಗುಜರಾತಿನ ಅಭಿವೃದ್ಧಿಯ ಬಗ್ಗೆ ಇದೇ ರೀತಿಯ ಚಿತ್ರಣವನ್ನು ತೋರಿಸಲಾಗುತ್ತಿದ್ದು, ಇತರೆ ರಾಜ್ಯಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬಂತಿದೆ.ಆದರೆ ಅಲ್ಲಿನ ಪರಿಸ್ಥಿತಿ ಬೇರೆಯೇ ಇದೆ. ಬಡವರು, ಅಸ್ಪಸಂಖ್ಯಾತರು ಈ ಅಭಿವೃದ್ಧಿಗೆ ಸಾಕಷ್ಟು ತ್ಯಾಗ ಮಾಡಬೇಕಾಗುತ್ತದೆ. ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಾರೆ. ಬುಡಕಟ್ಟು ಜನರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಸೋನಿಯಾ ಹೇಳಿದರು.ಗುಜರಾತಿನಲ್ಲಿ ರೈತರ ಭೂಮಿಯನ್ನು ಬಲವಂತದಿಂದ ಕಸಿದುಕೊಳ್ಳಲಾಗಿದೆ. ಗುಜರಾತಿನ ಮಹಿಳೆಯ ಸ್ಥಿತಿಗತಿ ಬಗ್ಗೆ ಮಾತನಾಡುವುದಾದರೆ ಅಲ್ಲಿ ವಿವಿಧ ರೀತಿಯ ಕಿರುಕುಳಗಳಿವೆ.

ಇದು ಅವರ ನೈಜ ಚಿತ್ರಣ ಎಂದು ಸೋನಿಯಾ ಹೇಳಿದರು. ಅವರು ವೈವಿಧ್ಯತೆಯಲ್ಲಿ ಏಕತೆಯ ಬಗ್ಗೆ ನಂಬಿಕೆ ಇರಿಸಿಲ್ಲ. ಅವರು ಹೃದಯಗಳನ್ನು ಪ್ರತ್ಯೇಕಿಸುತ್ತಾರೆ. ಸೋದರರು ತಮ್ಮ ತಮ್ಮಲ್ಲೇ ಕಚ್ಚಾಡುವಂತೆ ಮಾಡುತ್ತಾರೆ. ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಲ್ಲದ ಇಂತಹ ಜನರಿಂದ ದೇಶ ನಿರ್ಮಾಣವನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ