ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ರಚಿಸಿ – ಅದ್ಭುತ ಗೌರವ ಪಡೆಯಿರಿ

ಮಂಗಳವಾರ, 19 ನವೆಂಬರ್ 2019 (19:39 IST)
2020 ರ ಫೆಬ್ರವರಿ 5,6 ಹಾಗೂ 7 ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಆಸಕ್ತ ಕಲಾವಿದರು ಡಿಸೆಂಬರ್ 2ರೊಳಗಾಗಿ ರಚಿಸಿ ಸಲ್ಲಿಸಬೇಕೆಂದು ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದ್ದಾರೆ.  

ಕಲಬುರಗಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಐತಿಹಾಸಿಕ ನೆಲೆಗಳುಳ್ಳ ಪರಂಪರೆಯನ್ನು ಬಿಂಬಿಸುವ ಅರ್ಥಪೂರ್ಣವಾದ ಸುಂದರ ಮತ್ತು ಆಕರ್ಷಕ ಲಾಂಛನವನ್ನು ಸಿದ್ಧಪಡಿಸಿ 2019ರ ಡಿಸೆಂಬರ್ 2ರೊಳಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಭವನ, ಎಸ್.ವಿ.ಪಿ. ವೃತ್ತ ಕಲಬುರಗಿ-02 ವಿಳಾಸಕ್ಕೆ ಕಳುಹಿಸಬೇಕು.

ಲಾಂಛನದ ಕಲಾ ಕೃತಿಗಳನ್ನು ತಜ್ಞರ ಸಮಿತಿ ಪರಿಶೀಲಿಸಿ ಆಯ್ಕೆ ಮಾಡಿ, ಸ್ವಾಗತ ಸಮಿತಿಯ ಅನುಮೋದನೆಗೆ ಮಂಡಿಸಲಾಗುವುದು. ಆಯ್ಕೆಯಾದ ಲಾಂಛನದ ಕಲಾವಿದರಿಗೆ ಸೂಕ್ತ ಸಂಭಾವನೆ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448577411ಗೆ ಸಂಪರ್ಕಿಸಲು ಕೋರಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ