ಶಿಕ್ಷಣ ಸಚಿವರ ಬಗ್ಗೆ ಸದನದಲ್ಲಿ ಗೊಂದಲ

ಮಂಗಳವಾರ, 3 ಜುಲೈ 2018 (13:18 IST)
ಬೆಂಗಳೂರು: ವಿಧಾನಸಭೆ ಕಲಾಪ ನಡೆಯುವಾಗ ಹಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ. ಅಂತಹದ್ದೊಂದು ಘಟನೆಗೆ ಇಂದಿನ ಕಲಾಪ ಸಾಕ್ಷಿಯಾಯಿತು.

ಕಲಾಪದ ವೇಳೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ವಿಪಕ್ಷಗಳು ಪ್ರಶ್ನಿಸಿದಾಗ ಹಾಲಿ ಶಿಕ್ಷಣ ಸಚಿವರು ಉತ್ತರಿಸಬೇಕಾದ್ದು ಪದ್ಧತಿ. ಆದರೆ ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ತನ್ವೀರ್ ಸೇಠ್ ಎದ್ದು ನಿಂತು ಉತ್ತರಿಸಲು ಆರಂಭಿಸಿದರು.

ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿರುವ ಮಹೇಶ್ ತಣ್ಣಗೆ ಕುಳಿತಿದ್ದರು. ಇದನ್ನು ನೋಡಿ ವಿಪಕ್ಷ ಸದಸ್ಯರು ಯಾರ್ರೀ ಶಿಕ್ಷಣ ಸಚಿವರು ಎಂದು ಕಿಚಾಯಿಸಿದ ಘಟನೆ ನಡೆದಿದೆ. ಆದರೆ ಹಾಲಿ ಶಿಕ್ಷಣ ಸಚಿವರಿಗಿಂತ ಮಾಜಿ ಶಿಕ್ಷಣ ಸಚಿವರಿಗೇ ಹೆಚ್ಚು ಮಾಹಿತಿಯಿದ್ದಂತೆ ತೋರಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ