ಅಭ್ಯರ್ಥಿಯನ್ನು ತಿರಸ್ಕರಿಸಲು ಮತದಾರನಿಗೆ ಪರಮಾಧಿಕಾರ.

ಶುಕ್ರವಾರ, 27 ಸೆಪ್ಟಂಬರ್ 2013 (12:36 IST)
PTI
PTI
ಭಾರತದ ಸರ್ವೋಚ್ಛ ನ್ಯಾಯಾಲಯವು ಮತದಾರನಿಗೆ ಮತ್ತೊಂದು ಮಹೋನ್ನತ ಪರಮಾಧಿಕಾರವನ್ನು ನೀಡಿದೆ. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕನ್ನು ಮತದಾರನಿಗೆ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದೆ.

ಈ ಸಂಬಂಧ ಮುಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸುವ ಬಟನ್‌ ಅನ್ನು ಮತಯಂತ್ರದಲ್ಲಿ ಅಳವಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಇದರ ಅನ್ವಯ ಇನ್ನುಮುಂದೆ ಚುನಾವಣೆ ಯಂತ್ರಗಳಲ್ಲಿ ’none of the above’ ಎಂಬ ಬಟನ್‌ ಇರುತ್ತದೆ. ಇದರ ಅನ್ವಯ ಯಾವ ಅಭ್ಯರ್ಥಿಗಳಿಗೂ ನಾನು ಮತ ನೀಡುವುದಿಲ್ಲ ಎಂದು ಅಭ್ಯರ್ಥಿಗಳನ್ನು ತಿರಸ್ಕರಿಸಬಹುದಾಗಿದೆ.

ಮುಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಎಷ್ಟೇ ಮತ ಗಳಿಸಿದರೂ ಈ ಋಣಾತ್ಮಕ ಮತಗಳು ಕೂಡ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ ಅಭ್ಯರ್ಥಿಗಳನ್ನು ಮತಯಂತ್ರದ ಮೂಲಕವೇ ತಿರಸ್ಕರಿಸುವ ಹಕ್ಕನ್ನು ಮತದಾರರು ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ