ಟೀ ಮಾರಾಟ ಮಾಡುವಾತ ನಿಮ್ಮ ರಾಜಪರಂಪರೆಯನ್ನು ಅಳಿಸಿ ಹಾಕ್ತಾನೆ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಶನಿವಾರ, 18 ಜನವರಿ 2014 (12:25 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲವಾದ್ದರಿಂದ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಹಳೆಯ ವೃತ್ತಿಯಾದ ಹೋಟೆಲ್ ಆರಂಭಿಸಿ ಚಹಾ ಮಾರಾಟ ಮಾಡಬಹುದು ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ, ಚಹಾ ಮಾರಾಟ ಮಾಡುವ ವ್ಯಕ್ತಿ ಕಾಂಗ್ರೆಸ್‌ನ ರಾಜಪರಂಪರೆಯನ್ನು ಅಳಿಸಿ ಹಾಕುತ್ತಾರೆ ಎಂದು ಕಿಡಿಕಾರಿದೆ.

ಮುಂಬರುವ 2014ರ ಲೋಕಸಭೆ ಚುನಾವಣೆಯಲ್ಲಿ ಚಹಾ ಮಾರಾಟ ಮಾಡುವ ವ್ಯಕ್ತಿ ರಾಜವಂಶವನ್ನು ಸೋಲಿಸುವಂತಹ ಶಕ್ತಿ ದೇಶದ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಲಿದೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.

ನಾನು ರಾಜಕೀಯದಲ್ಲಿದ್ದೇನೆ. ಲೋಕಸಭೆಯ ಚುನಾವಣೆ ಕಣ ಡ್ರಾಯಿಂಗ್ ಕೋಣೆಯಲ್ಲ. ಇದೊಂದು ಬಾಕ್ಸಿಂಗ್ ರೂಮ್. ನಿಮಗೆ ಬಿಸಿಯನ್ನು ತಾಳದಿದ್ದಲ್ಲಿ ಅಡುಗೆ ಕೋಣೆಯಿಂದ ಹೊರಹೋಗಬೇಕು ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಹೆಸರುವಾಸಿಯಾದ 72 ವರ್ಷ ವಯಸ್ಸಿನ ಅಯ್ಯರ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 21ನೇ ಶತಮಾನದಲ್ಲಿ ಪ್ರಧಾನಿಯಾಗುವುದಂತೂ ಸಾಧ್ಯವಿಲ್ಲ. ಆದರೆ, ತಮ್ಮ ಹಳೆಯ ವೃತ್ತಿಗೆ ಮರಳಲು ಬಯಸಿದಲ್ಲಿ ಎಐಸಿಸಿ ಸಭೆಯಲ್ಲಿ ಟೀ ಮಳಿಗೆ ಹಾಕಿ ಟೀ ಮಾರಾಟ ಮಾಡಲು ಅನುಕೂಲ ಕಲ್ಪಿಸಿಕೊಡುತ್ತೇವೆ ಎಂದು ಲೇವಡಿ ಮಾಡಿದ್ದರು.

ವೆಬ್ದುನಿಯಾವನ್ನು ಓದಿ