ತೃತೀಯ ರಂಗಕ್ಕೆ ಚಾಲನೆ, ಆದರೆ ಪ್ರಧಾನಿ ಅಭ್ಯರ್ಥಿ ಯಾರು?

ಶುಕ್ರವಾರ, 14 ಮಾರ್ಚ್ 2014 (14:39 IST)
PR
PR
ನವದೆಹಲಿ: ತೃತೀಯ ರಂಗದ ರಚನೆಗೆ ಅಂತಿಮವಾಗಿ ಚಾಲನೆ ನೀಡಲಾಗಿದ್ದು, ಯುಪಿಎಯನ್ನು ಸೋಲಿಸುವ ದಿಕ್ಕಿನಲ್ಲಿ ಮತ್ತು ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಅವಕಾಶ ನೀಡದಂತೆ 11 ಪಕ್ಷಗಳು ಜತೆಗೂಡಿ ಕೆಲಸ ಮಾಡುವುದಾಗಿ ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದರು. 11 ಪಕ್ಷಗಳ ಸಭೆಯ ಕೊನೆಯಲ್ಲಿ ತೃತೀಯ ರಂಗ ರೂಪುಗೊಂಡಿತು.'ಬಿಜೆಪಿಯ ನೀತಿಗಳು ಕಾಂಗ್ರೆಸ್ ನೀತಿಗಳನ್ನು ಹೋಲುತ್ತವೆ. ಬಿಜೆಪಿ ಮತ್ತು ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರದಂತೆ ತಡೆಯಬೇಕು.

ನರೇಂದ್ರ ಮೋದಿ ಪ್ರಧಾನಿಯಾಗದಂತೆ ನೋಡಿಕೊಳ್ಳಬೇಕು. ಮೋದಿ ಜಾತ್ಯತೀತ ಚೌಕಟ್ಟಿಗೆ ಸವಾಲು ಹಾಕಿದ್ದಾರೆ' ಎಂದು ಕಾರಟ್ ಹೇಳಿದರು.'ನಾವು ಜನಾಧಾರಿತ ಅಭಿವೃದ್ಧಿ ಪಥವನ್ನು ಒದಗಿಸುತ್ತೇವೆ. ಪ್ರಜಾಪ್ರಭುತ್ವ ಚೌಕಟ್ಟು ಬಲಪಡಿಸಲು ನಾವು ಕೆಲಸ ಮಾಡುತ್ತೇವೆ 'ಎಂದು ಕಾರಟ್ ಹೇಳಿದರು. ಚುನಾವಣೆ ಬಳಿಕ ತೃತೀಯ ರಂಗದ ಪ್ರಧಾನಿಯನ್ನು ಆಯ್ಕೆ ಮಾಡುತ್ತೇವೆ ಎಂದು ಕಾರಟ್ ಹೇಳಿದರು.

ಈಗ ತೃತೀಯ ರಂಗ ಚಾಲನೆಗೆ ಬಂದಿರುವುದರಿಂದ ಮತದಾರರ ಮನಸ್ಸಿನಲ್ಲಿ ತೃತೀಯರಂಗದ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ.ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇವರು ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳಲು ಸನ್ನದ್ದರಾಗಿದ್ದಾರೆ. ಆದರೆ ತೃತೀಯರಂಗ ಅಧಿಕಾರಕ್ಕೆ ಬಂದು ಪ್ರಧಾನಿ ಹುದ್ದೆ ಯಾರಿಗೆ, ಯಾವಾಗ ದಕ್ಕುತ್ತದೋ ಕಾದುನೋಡಬೇಕು.

ವೆಬ್ದುನಿಯಾವನ್ನು ಓದಿ