ಪಟೇಲ್‌ರ ಮೂರ್ತಿ ಸ್ಥಾಪನೆಗೆ ಜನರಿಂದ ಉಕ್ಕು ಕೋರಿದ ಮೋದಿ, ನಾಳೆ ಜನರಿಂದ ಪತ್ನಿಯನ್ನು ಕೋರುತ್ತಾರೆ: ಮಲಿಕ್ ಲೇವಡಿ

ಮಂಗಳವಾರ, 31 ಡಿಸೆಂಬರ್ 2013 (15:41 IST)
PTI
ಸರ್ಧಾರ್ ವಲ್ಲಭಭಾಯಿ ಪಟೇಲ್ ಮೂರ್ತಿಯ ಪ್ರತಿಷ್ಠಾಪನೆಗಾಗಿ ಜನತೆಯಿಂದ ಉಕ್ಕು ಕ್ಷೇಳುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನಾಳೆ ಜನತೆಯಿಂದ ಪತ್ನಿಯನ್ನು ಬಯಸುವಾಗ ಚಿನ್ನವನ್ನು ಕೇಳುತ್ತಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಸರಕಾರದ ಸಚಿವ ಮನ್ನಾನ್ ಮಲಿಕ್ ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಠಿಸಿದೆ.

ಇದಕ್ಕಿಂತ ಮೊದಲು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಜನಸಾಮಾನ್ಯರಿಂದ ಇಟ್ಟಿಗೆಗಳನ್ನು ನೀಡುವಂತೆ ಕೋರಿತ್ತು. ಸರ್ಧಾರ್ ಪಟೇಲ್ ಮೂರ್ತಿ ಪ್ರತಿಷ್ಠಾಪನೆಗಾಗಿ ಉಕ್ಕು ನೀಡುವಂತೆ ಕೋರುತ್ತಿದೆ, ವಿಧುರನಾದ ಮೋದಿ ಜನತೆಯಿಂದ ಪತ್ನಿಯನ್ನು ಬಯಸುವಾಗ ಚಿನ್ನವನ್ನು ನೀಡುವಂತೆ ಕೋರುತ್ತಾರೆ ಎಂದು ಪಶುಸಂಗೋಪನಾ ಖಾತೆ ಸಚಿವ ಮನ್ನಾನ್ ಮಲಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಚಿವ ಮನ್ನಾನ್ ಹೇಳಿಕೆಯಿಂದ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ರಬೀಂದ್ರಾ ರೈ ಕೂಡಲೇ ಸಚಿವನನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಒತ್ತಾಯಿಸಿದ್ದಾರೆ.

ಸಚಿವ ಮಲಿಕ್ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಸಚಿವರಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಕಿಡಿಕಾರಿದ್ದಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರದ ಸಚಿವರ ಹೇಳಿಕೆಗೆ ಕಾಂಗ್ರೆಸ್ ಸಹಮತವಿಲ್ಲ ಎಂದು ಜಾರ್ಖಂಡ್ ಕಾಂಗ್ರೆಸ್ ಘಟಕ ಸ್ಪಷ್ಟಪಡಿಸಿದೆ.

ಸಚಿವರ ನೀಡಿರುವ ಹೇಳಿಕೆ ಕುಚ್ಯೋದ್ಯತನದಿಂದ ಕೂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಅಸಭ್ಯ ಹೇಳಿಕೆಗಲಿಗೆ ಆಸ್ಪದವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಶೈಲೇಶ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ