ಸಿಎಂ ಜಯಲಲಿತಾ ವಿದೇಶಕ್ಕೆ ಯಾಕೆ ಹೋಗುವುದಿಲ್ಲ ಗೊತ್ತಾ? ರಹಸ್ಯ ಸಂಗತಿ ಬಹಿರಂಗ

ಶುಕ್ರವಾರ, 30 ಸೆಪ್ಟಂಬರ್ 2016 (16:02 IST)
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಆರೋಗ್ಯದಲ್ಲಿ ಏರು ಪೇರಾಗಿದ್ದರೂ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸುತ್ತಿದ್ದಾರಂತೆ. ಯಾಕೆ ಗೊತ್ತಾ? ಇದು ಜೋತಿಷ್ಯದ ಮೇಲಿರುವ ಅವರ ನಂಬಿಕೆಯಂತೆ.
 
ಸಿನೆಮಾ ನಟಿಯಾಗಿದ್ದಾಗ ಹಲವಾರು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದ ಜಯಲಲಿತಾ, ರಾಜಕೀಯಕ್ಕೆ ಬಂದ ನಂತರ ಯಾವತ್ತೂ ಸಾಗರೋಲ್ಲಂಘನ ಮಾಡಿಲ್ಲ. ಹಲವಾರು ಬಾರಿ ವಿದೇಶಗಳಿಂದ ಬಂದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
 
ಜಯಲಲಿತಾ ಅವರ ನ್ಯೂಮರಾಲಾಜಿ ಜೋತಿಷಿಗಳ ಪ್ರಕಾರ, ಒಂದು ವೇಳೆ, ಜಯಲಲಿತಾ ವಿದೇಶಕ್ಕೆ ತೆರಳಿದಲ್ಲಿ ಅವರ ಜೀವಕ್ಕೆ ಅಪಾಯ ಎದುರಾಗುತ್ತದೆಯಂತೆ. ಆದ್ದರಿಂದಲೇ, ಯಾವತ್ತು ವಿದೇಶ ಪ್ರವಾಸದತ್ತ ಮುಖ ಮಾಡಿಲ್ಲ. 
 
ಜೋತಿಷ್ಯವನ್ನು ಅಪಾರವಾಗಿ ನಂಬುವ ಜಯಲಲಿತಾ, ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸಿಂಗಾಪೂರ್‌ಕ್ಕೆ ತೆರಳುವಂತೆ ವೈದ್ಯರು ಮಾಡಿದ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನಾಮಪತ್ರ ಸಲ್ಲಿಕೆ, ಪ್ರಮಾಣ ವಚನ ಸ್ವೀಕಾರ ಸೇರಿದಂತೆ ಮನೆಯಿಂದ ಯಾವುದೇ ಕಾರ್ಯಕ್ರಮಕ್ಕಾಗಿ ಹೊರಗೆ ಕಾಲಿಡುವ ಮುನ್ನ ಜೋತಿಷ್ಯರ ಅಭಿಪ್ರಾಯ ಪಡೆದೇ ಹೊರಗೆ ಕಾಲಿಡುವ ಜಯಲಲಿತಾ, ತಮ್ಮ ಜೋತಿಷಿಗಳ ಯಾವ ಮಾತನ್ನು ಮೀರುವದಿಲ್ಲವಂತೆ.
 
ಕಳೆದ ಹಲವು ದಿನಗಳಿಂದ ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಜಯಲಲಿತಾ, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವಂತೆ ವೈದ್ಯರು ನೀಡಿದ ಸಲಹೆಯನ್ನು ತಿರಸ್ಕರಿಸಿದ್ದಾರಂತೆ.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ