ಬೆಲೆ ಏರಿಕೆ ನಿಯಂತ್ರಿಸ್ತೇವೆ,ಬ್ಲ್ಯಾಕ್ ಮನಿ ಸಮಸ್ಯೆ ನಿವಾರಿಸ್ಬೇಕು: ಪ್ರಣಬ್

ಶುಕ್ರವಾರ, 16 ಮಾರ್ಚ್ 2012 (11:47 IST)
PR
ಇನ್ನು ಮೂರು ತಿಂಗಳಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ. ಆಹಾರ ಭದ್ರತೆ ಕಾಯ್ದೆಗೆ ಸಂಪೂರ್ಣ ಒತ್ತು ನೀಡಲು ಕೇಂದ್ರದ ಯುಪಿಎ ಸರ್ಕಾರ ಬದ್ಧವಾಗಿದೆ. ಏತನ್ಮಧ್ಯೆ ಕಪ್ಪು ಹಣದ ಸಮಸ್ಯೆಯನ್ನು ನಿವಾರಿಸುವ ಅಗತ್ಯತೆ ಬಹಳಷ್ಟಿದೆ ಎಂದು ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದರು.

ಶುಕ್ರವಾರ ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸುತ್ತಾ ಮಾತನಾಡಿದ ಅವರು, ರೇಷನ್ ಬಳಕೆದಾರರಿಗೆ ನೇರ ಸಬ್ಸಿಡಿ, ರೈತರಿಗೆ ನೇರವಾಗಿ ಸಬ್ಸಿಡಿ ನೀಡಿಕೆ, 2012ರ ಆಗಸ್ಟ್‌ನಿಂದ ಜಿಎಸ್‌ಟಿ ಜಾರಿಗೆ ನಿರ್ಧರಿಸಲಾಗಿದೆ ಎಂದರು. ಪರೋಕ್ಷ ತೆರಿಗೆ ಕಡಿವಾಣಕ್ಕೆ ಜಿಎಸ್‌ಟಿ ಜಾರಿಗೆ ನಿರ್ಧರಿಸಲಾಗಿದೆ.

ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಪ್ರಣಬ್,ಪೆಟ್ರೋಲಿಯಂ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹಾಗಾಗಿ ವಿತ್ತೀಯ ಕೊರತೆಯನ್ನು ಇಳಿಸುವ ಜವಾಬ್ದಾರಿ ಇದೆ. ಮುಂದಿನ ದಿನಗಳಲ್ಲಿ ದರ ಇಳಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಲವು ಸವಾಲುಗಳ ನಡುವೆ ಬಜೆಟ್ ಮಂಡಿಸುತ್ತಿರುವುದಾಗಿ ಹೇಳಿದ ಪ್ರಣಬ್, ದೇಶದ ಆರ್ಥಿಕ ಸ್ಥಿತಿ ಸುದೃಢವಾಗುತ್ತಿದೆ. ದುರ್ಬಲ ಕೈಗಾರಿಕಾ ಪ್ರಗತಿಯಿಂದ ಹಿನ್ನಡೆಯಾಗಿದೆ. ಪ್ರಸಕ್ತ ವರ್ಷದಲ್ಲಿ ದೇಶದ ಕೃಷಿ ಕ್ಷೇತ್ರದಲ್ಲಿ 2.5ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ