ಡೀಸೆಲ್ ನಿಯಂತ್ರಣ ಸರ್ಕಾರ ಕೈಬಿಟ್ರೆ ದೇಶ ಉದ್ದಾರ!

ಸೋಮವಾರ, 23 ಜುಲೈ 2012 (12:35 IST)
PR
ಬದಲಾಗುತ್ತಿರುವ ಆರ್ಥಿಕ ಸ್ಥಿತಿಗತಿಯ ನಿಯಂತ್ರಣಕ್ಕೆ ಹಳೆಯ ಮಾದರಿಯ ಆರ್ಥಿಕ ನೀತಿಯನ್ನೇ ಅನುಸರಿಸಿಕೊಂಡು ಮುಂದುವರಿದರೆ ವ್ಯತಿರಿಕ್ತ ಪರಿಣಾಮ ಭೀರುವ ಸಾಧ್ಯತೆ ಬಲವಾಗಿರುವುದರಿಂದಾಗಿ, ಶೀಘ್ರವೇ ಡೀಸೆಲ್ ಮೇಲಿನ ನಿಯಂತ್ರಣವನ್ನು ಸರ್ಕಾರ ಕೂಡಲೇ ಕೈಬಿಡಬೇಕಾಗಿದೆ ಎಂದು ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹೆಗಾರರಾದ ಸಿ.ರಂಗರಾಜನ್ ಅವರು ತಿಳಿಸಿದ್ದಾರೆ.

ಹಾಗೂ, ಜಾಗತಿಕ ಆರ್ಥಿಕತೆಗೆ ನಮ್ಮ ದೇಶೀಯ ಉತ್ಪನ್ನಗಳನ್ನು ವಿಲೀನಗೊಳಿಸುವ ನಿಟ್ಟಿನಲ್ಲಿ ವಿದೇಶಿ ನೇರ ಹೂಡಿಕೆಗೆ ಅನುವುಮಾಡಿಕೊಡುವುದು ಸುಲಭೋಪಾಯ ಎಂದೂ ತಿಳಿಸಿದ ಅವರು, ಶೀಘ್ರವೇ ಚಿಲ್ಲರೆ ಮಾರಾಟದಲ್ಲಿ ವಿದೇಶಿ ಕಂಪನಿಗಳಿಗೆ ನೇರ ಹೂಡಿಕೆಗೆ ಅನುಮತಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ