ಮನೇಸರ್ ಘಟಕ ಸ್ಥಗಿತ; ಮಾರುತಿ ಸುಜುಕಿ ಷೇರು ಕುಸಿತ

ಸೋಮವಾರ, 23 ಜುಲೈ 2012 (16:19 IST)
PR
ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಿನ ವೈಷಮ್ಯ ಹಿನ್ನೆಲೆಯಲ್ಲಿ ಅಧಿಕಾರಿಯ ಕೊಲೆ ನಡೆದ ಮಾರುತಿ ಸುಜುಕಿಯ ಮನೇಸರ್ ಘಟಕ ಸ್ಥಗಿತಗೊಂಡಿರುವುದರಿಂದಾಗಿ ಮಾರುತಿ ಹಾಗೂ ಸುಜುಕಿ ಕಂಪನಿಯ ಷೇರುಗಳು ಭಾರೀ ಕುಸಿದಿದೆ.

ಕೊಲೆ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರಿಂದ ತನಿಖೆಯುತ್ತಿರುವುದರಿಂದಾಗಿ, ಕಂಪನಿಯ ಮರುಚಾಲನೆ ದಿನಾಂಕವನ್ನು ಸೂಚಿಸಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ನಂತರವೇ ಕಂಪನಿ ಚಾಲನೆಯ ಕುರಿತು ಚಿಂತಿಸಲಾಗುವುದು ಎಂದು ಮಾರುತಿ ಸುಜುಕಿ ತಿಳಿಸಿದ ಬಳಿಕ ಕಂಪನಿಯ ಷೇರುಗಳು ಕುಸಿತ ಕಂಡಿದೆ.

ಮಾರುತಿ ಕಂಪನಿಯ ಷೇರುಗಳು ಶೇಕಡಾ 5.7 ರಷ್ಟು ಕುಸಿದಿದ್ದರೆ, ಸುಜುಕಿ ಕಂಪನಿಯ ಬೆಲೆ ಶೇಕಡಾ 2.9 ರಷ್ಟು ಕುಸಿದಿರುವುದಾಗಿ ಷೇರು ಮಾರುಕಟ್ಟೆ ಮೂಲಗಳು ತಿಳಿಸಿವೆ.


ವೆಬ್ದುನಿಯಾವನ್ನು ಓದಿ