ಫಾರೆಕ್ಸ್‌‌‌: ರೂಪಾಯಿಯಲ್ಲಿ 27 ಪೈಸೆ ಕುಸಿತ

ಶುಕ್ರವಾರ, 11 ಏಪ್ರಿಲ್ 2014 (18:30 IST)
PR
ಆಯತಗಾರರಿಂದ ಡಾಲರ್‌ನ ಬೇಡಿಕೆ ಹೆಚ್ಚಳವಾದ ಕಾರಣ ಪಾರೆಕ್ಸ್‌ ಮಾರುಕಟ್ಟೆಯಲ್ಲಿ ಇಂದು ಪ್ರಾರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 27 ಪೈಸೆ ಕುಸಿತ ಕಂಡು ಪ್ರತಿ ಡಾಲರ್‌‌ಗೆ 60.34 ರೂಪಾಯಿ ಆಗಿದೆ.

ಯೋರೋಗೆ ತುಲನೆ ಮಾಡಿದರೆ, ಡಾಲರ್‌ ಮೌಲ್ಯ ಹೆಚ್ಚಳವಾದ ಮತ್ತು ಆಯತಗಾರರಿಂದ ಡಾಲರ್‌‌ನ ಬೇಡಿಕೆ ಹೆಚ್ಚಳವಾಗಿ ರೂಪಾಯಿಯಲ್ಲಿ ಕುಸಿತ ಕಂಡಿದೆ ಎಂದು ಫಾರಕ್ಸ್‌ ಮಾರುಕಟ್ಟೆಯ ವಿಶ್ಲೇಷಕರು ತಿಳಿಸಿದ್ದಾರೆ.

ಫಾರೆಕ್ಸ್‌‌ ಮಾರುಕಟ್ಟೆಯಲ್ಲಿ ಹಿಂದಿನ ದಿನದ ವಹಿವಾಟುವಿನಲ್ಲಿ ರೂಪಾಯಿಯಲ್ಲಿ 7 ಪೈಸೆ ಸುಧಾರಣೆ ಆಗಿ ಪ್ರತಿ ಡಾಲರ್‌‌ಗೆ 60.07 ರೂಪಾಯಿ ಆಗುವುದರ ಮೂಲಕ ಮಾರುಕಟ್ಟೆ ಸ್ಥಗಿತಗೊಂಡಿತ್ತು. ಆದರೆ ಇಂದಿನ ಪ್ರಾರಂಬಿಕ ವಹಿವಾಟುವಿನಲ್ಲಿ ರೂಪಾಯಿಯಲ್ಲಿ 27 ಪೈಸೆ ಕುಸಿತ ಕಾಣುವುದರ ಮೂಲಕ ಪ್ರತಿ ಡಾಲರ್‌‌ಗೆ 60.34 ರೂಪಾಯಿಗೆ ತಲುಪಿದೆ.

ಮುಂಬೈ ಶೇರು ಮಾರುಕಟ್ಟೆಯಕಲ್ಲಿ ಪ್ರಾರಂಬಿಕ ವಹಿವಾಟುವಿನಲ್ಲಿ ಸೂಚ್ಯಂಕದಲ್ಲಿ 149.30 ಅಂಕ ಅಥವಾ ಶೇ.0.66 ಇಳಿಕೆಯ ಜೊತೆಗೆ ಸೆನ್‌‌ಸೆಕ್ಸ 22,566.03 ಅಂಕಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ