ಟ್ವಿಟರ್‌ನಲ್ಲಿಯೂ ರಂಗೇರಿದ ಚುನಾವಣೆ

ಶುಕ್ರವಾರ, 11 ಏಪ್ರಿಲ್ 2014 (18:32 IST)
PR
ದೇಶದಲ್ಲಿ ಲೋಕಸಬೆ ಚುನಾವಣೆ ನಡೆಯುತ್ತಿದೆ ಮತ್ತು ಪ್ರಚಾರದ ಅಬ್ಬರ ಕೂಡ ಹೆಚ್ಚಳವಾಗುತ್ತಿದೆ. ಈಗಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಚುನಾವಣೆ ಕುರಿತು ಕಮೆಂಟ್ಸ್‌‌ಗಳು ಸಾಕಷ್ಟು ಬರುತ್ತಿವೆ. ಟ್ವಿಟರ್‌‌‌‌ ನಲ್ಲಿ ಕಳೆದ 24 ಗಂಟೆಯಲ್ಲಿ ಚುನಾವಣೆಗೆ ಸಂಬಂಧಿಸಿದ 6.28 ಲಕ್ಷ ಟ್ವಿಟ್‌‌‌ ಪೋಸ್ಟ್ ಆಗಿವೆ.

ಚುನಾವಣೆಗೆ ಸ್ಪರ್ದಿಸಿದ ಉಮೇದುವಾರರು, ಪತ್ರಕರ್ತರು ಮತ್ತು ನಾಗರಿಕರು ಚುನಾವಣೆಗೆ ಸಂಬಂಧ ಪಟ್ಟ ವಿಷಯಗಳನ್ನು ಟ್ವಿಟರ್‌‌‌‌ನಲ್ಲಿ ಟ್ವಿಟ್‌ ಮಾಡುತ್ತಲಿದ್ದಾರೆ, ಎಂದ ಟ್ವಿಟರ್‌‌ ಕಂಪೆನಿಯ ಮೂಲಗಳು ತಿಳಿಸಿವೆ.

ಟ್ವಿಟರ್‌‌ನಲ್ಲಿ ಈ ಎಲ್ಲಾ ಟ್ವಿಟ್‌‌ಗಳನ್ನು ನೊಡಿದರೆ ಇದರಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಗೆ ಸಂಬಂಧಪಟ್ಟ ವಿಷಯಗಳು ಹೆಚ್ಚು ಟ್ವಿಟ್‌‌ ಆಗುತ್ತಿವೆ. ಇದರ ನಂತರ ಆಮ್‌ ಆದ್ಮಿ ಪಾರ್ಟಿ ಮತ್ತು ಐಎಮ್‌‌‌ಬಿ ದಿ ಕಾಂಗ್ರೆಸ್‌‌ ಶಬ್ದಗಳನ್ನು ಹೆಚ್ಚು ಬಳಸಲಾಗುತ್ತಿದೆ ಎಂದು ಟ್ವಿಟರ್‌ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ