ಕ್ರೆಡಾಯ್‌ನ ಕಾರವಾರ ಚಾಪ್ಟರ್ ಆರಂಭ : ಶ್ರೀ ಸ್ಯಾಮ್ಸನ್ ಡಿ ಸೋಜ ಅಧಕ್ಷ, ಶ್ರೀ ಕೃಷ್ಣಾನಂದ ಬಂಡೇಕರ್ ಕಾರ್ಯದರ್ಶಿಯಾಗಿ ಆಯ್ಕೆ

ಶನಿವಾರ, 12 ಏಪ್ರಿಲ್ 2014 (17:43 IST)
PR
ಬೆಂಗಳೂರು, ಏಪ್ರಿಲ್ ೧೧: ಕಾನ್‌ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯಾ(ಕ್ರೆಡಾಯ್)ದ ೯ ನೇ ಚಾಪ್ಟರ್ ಕಾರವಾರದ ದಿ ಎಮರಾಲ್ಡ್ ಹೊಟೆಲ್‌ನಲ್ಲಿ ಉದ್ಘಾಟನೆಗೊಂಡಿತು.

೨೦೧೨ ರಲ್ಲಿ ಬಿಜಾಪುರ ಮತ್ತು ಗುಲ್ಬರ್ಗಾದಲ್ಲಿ ಕ್ರೆಡಾಯ್‌ನ ಚಾಪ್ಟರ್ ಆರಂಭವಾದ ಬೆನ್ನಲ್ಲೇ ಇದೀಗ ಕಾರವಾರವೂ ಕ್ರೆಡಾಯ್ ಕುಟುಂಬಕ್ಕೆ ಸೇರಿದಂತಾಗಿದೆ. ಇಲ್ಲಿನ ೨೦ ಕ್ಕೂ ಹೆಚ್ಚು ಡೆವಲಪರ್‌ಗಳು ೫೦ ಕ್ಕೂ ಹೆಚ್ಚು ನಿರ್ಮಾಣ ಕಾಮಗಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಕ್ರೆಡಾಯ್ ಕಾರ್ಯರೂಪಕ್ಕೆ ಬರುವ ಮೂಲಕ ಇಂತಹ ಅಭಿವೃದ್ಧಿ ಯೋಜನೆಗಳು ಮುಖ್ಯವಾಹಿನಿಗೆ ಬರಲು ಸಾಧವಾಗುತ್ತದೆ. ಇದೇ ರೀತಿ ಕ್ರೆಡಾಯ್ ರಾಜ್ಯದ ಇನ್ನೂ ಕೆಲವು ನಗರಗಳಲ್ಲಿ ಘಟಕಗಳನ್ನು ಸ್ಥಾಪಿಸುವ zಶ ಹೊಂದಿದೆ.

ಉದ್ಘಾಟನೆ ಸಂದಭದಲ್ಲಿ ಮಾತನಾಡಿದ ಕ್ರೆಡಾಯ್‌ನ ಕರ್ನಾಟಕ ಚಾಪ್ಟರ್‌ನ ಅಧಕ್ಷ ಶ್ರೀ ನಾಗರಾಜ ರೆಡ್ಡಿ ಅವರು, ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಡೆವಲಪರ್‌ಗಳಿಗೆ ಈ ಕ್ರೆಡಾಯ್ ಘಟಕ ಸಹಕಾರಿಯಾಗುವುದಲ್ಲದೇ, ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮದ ಪ್ರಗತಿಗೆ ನಾಂದಿ ಹಾಡಲಿದೆ. ಕ್ರೆಡಾಯ್ ಅತ್ಯುತ್ತಮ ಗುಣಮಟ್ಟದ ಕಾಮಗಾರಿಗೆ ಒಂದು ಹೆಜ್ಜೆ ಗುರುತಿನಂತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಮನೆಗಳ ಖರೀದಿದಾರರಿಗೆ ಗುಣಮಟ್ಟದ ಖಾತರಿಯನ್ನು ನೀಡಲಿದೆ ಎಂದು ತಿಳಿಸಿದರು.
ಕಾರವಾರದ ಗಿರಿಜಾಬಾಯಿ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲರಾದ ಶ್ರೀ ಆರ್.ಎಸ್. ರಾಜೇಂದ್ರಕುಮಾರ್ ಅವರು ಮಾತನಾಡಿ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರವಾರ ನಗರಕ್ಕೆ ಬಹುಮಹಡಿ ಕಟ್ಟಡಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಬಹುದಿನದ ಕನಸನ್ನು ನನಸು ಮಾಡುವ ಜವಾಬ್ದಾರಿ ಕ್ರೆಡಾಯ್ ಮೇಲಿದೆ ಎಂದರು.

ಕಾರವಾರ ಕ್ರೆಡಾಯ್‌ನ ನೂತವ ಅಧಕ್ಷ ಸ್ಯಾಮ್ಸನ್ ಡಿಸೋಜ ಅವರು ಮಾತನಾಡಿ, ಕ್ರೆಡಾಯ್‌ನ ಸಹಕಾರದಿಂದ ಇಲ್ಲಿನ ಗ್ರಾಹಕರ ಕನಸನ್ನು ನನಸು ಮಾಡುವ ಸಂಕಲ್ಪ ಮಾಡಿzವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಕಾರವಾರ ಕ್ರೆಡಾಯ್‌ನ ಕಾರ್ಯದರ್ಶಿ ಶ್ರೀ ಕೃಷ್ಣಾನಂದ ಬಂಡೇಕರ್, ಕಾರವಾರ ಮತ್ತು ಸುತ್ತಮುತ್ತಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.

ಕಾರವಾರ ಕ್ರೆಡಾಯ್‌ನ ಅಧಕ್ಷ(ಚುನಾಯಿತ) ಶ್ರೀ ಜಗದೀಶ್ ಬಾಬು ಮತ್ತು ಕಾರವಾರ ಕ್ರೆಡಾಯ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀ ಅನಿಲ್ ನಾಯಕ್ ಅವರು ಮಾತನಾಡಿ ಕ್ರೆಡಾಯ್ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರವಾರ ಕ್ರೆಡಾಯ್ ಚಾಪ್ಟರ್‌ನ ಹೊಸ ಸದಸ್ಯರು
ಶ್ರೀ ಗಣೇಶ್ ಬೊಮ್ಕರ್
ಶ್ರೀ ಅಭಿಜಿತ್ ಪಾವಸ್ಕರ್
ಇಮ್ತಿಯಾಜ್ ಭಕಾರಿ
ಅಬ್ದುಲ್ ರಹೀಂ
ಅನಂತ್ ಭಟ್
ಸೈಯದ್ ದಸ್ತಗಿರ್
ಈ ಹೊಸ ಸದಸ್ಯರಿಗೆ ಕ್ರೆಡಾಯ್‌ನ ಅಧಕ್ಷ ಶ್ರೀ ನಾಗರಾಜ ರೆಡ್ಡಿ ಅವರು ಪ್ರತಿe ವಿಧಿ ಬೋಧಿಸಿದರು.

ಕ್ರೆಡಾಯ್ ಬಗ್ಗೆ ಮಾಹಿತಿ
ರಾಷ್ಟ್ರೀಯ ಕ್ರೆಡಾಯ್‌ನ ಅಂಗಸಂಸ್ಥೆ ಕರ್ನಾಟಕ ಕ್ರೆಡಾಯ್. ೧೯೯೯ ರಲ್ಲಿ ಕಾನ್‌ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯಾ ಹುಟ್ಟಿಕೊಂಡಿತು. ೨೦ ರಾಜ್ಯಗಳ ೧೩೬ ನಗರಗಳಲ್ಲಿ ತನ್ನ ಸಂಘಗಳನ್ನು ಹೊಂದಿರುವ ಕ್ರೆಡಾಯ್‌ಗೆ ಸುಮಾರು ೯ ಸಾವಿರ ಡೆವಲಪ್ಪರ್‌ಗಳು ಸದಸ್ಯರಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದ ಬಲವಧನೆಗಾಗಿ ದುಡಿಯುತ್ತಿರುವ ಸಂಸ್ಥೆ ಸರ್ಕಾರ, ಬಂಡವಾಳ ಹೂಡಿಕೆದಾರರನ್ನು ಈ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಾ ಬರುತ್ತಿದೆ.

ಕ್ರೆಡಾಯ್ ಕರ್ನಾಟಕದ ಇತರೆ ಘಟಕಗಳು
ಕ್ರೆಡಾಯ್ ಬೆಂಗಳೂರು
ಕ್ರೆಡಾಯ್‌ಬೆಳಗಾವಿ
ಕ್ರೆಡಾಯ್ ಹುಬ್ಬಳ್ಳಿ-ಧಾರವಾಡ
ಕ್ರೆಡಾಯ್ ಮಂಗಳೂರು
ಕ್ರೆಡಾಯ್ ಮೈಸೂರು
ಕ್ರೆಡಾಯ್ ಉಡುಪಿ
ಕ್ರೆಡಾಯ್ ಬಿಜಾಪುರ
ಕ್ರೆಡಾಯ್ ಗುಲ್ಬರ್ಗಾ

ವೆಬ್ದುನಿಯಾವನ್ನು ಓದಿ