ಸ್ಯಾಮ್‌ಸುಂಗ್ ಬಿಡುಗಡೆ ಮಾಡಿದೆ ಹೊಸ ಗ್ಯಾಲಾಕ್ಸಿ ಗ್ರ್ಯಾಂಡ್ ಝೆಡ್
ಮಂಗಳವಾರ, 15 ಏಪ್ರಿಲ್ 2014 (19:36 IST)
PR
ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ಪಾದಿಸುವ ಕಂಪೆನಿಯಾದ ಸ್ಯಾಮಸುಂಗ್ ತನ್ನ ಗ್ರ್ಯಾಂಡ್ ಫೆಮಿಲಿಯ ಜೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್‌ನ ಹೆಸರು ಗೆಲಾಕ್ಸಿ ಗ್ರ್ಯಾಂಡ್ ಝೇಡ್ ಎಂದಿದೆ. ಈ ಸ್ಮಾರ್ಟ್‌ಫೋನ್ ಡ್ಯುವೆಲ್ ಸಿಮ್ , ಡ್ಯುವೆಲ್ ಕೊರ್ ಮತ್ತು ಆಂಡ್ರೈಡ್ 4.01 ಆಧಾರಿತವಾಗಿದೆ.
ಈ ಸ್ಮಾರ್ಟ್‌ಫೊನ್‌ನ ಭಾರ ಕೇವಲ 161 ಗ್ರಾಂ ಇದೆ ಮತ್ತು ಇದರ ದಪ್ಪ ಕೇವಲ 9.6 ಮಿಮಿ ಇದೆ. ಇದರ ರಿಯರನಲ್ಲಿ 8 ಎಮ್‌ಪಿಯ ಕ್ಯಾಮೆರಾ ಮತ್ತು ಎದುರುಗಡೆ 2 ಎಮ್‌ಪಿ ಕ್ಯಾಮೆರಾ ಇದೆ. ಇದರಲ್ಲಿ ಎಲ್‌ಇಡಿ ಫ್ಲ್ಯಾಶ್ ಕೂಡ ಇದೆ. ಈ ರಿಯರ ಕ್ಯಾಮೆರಾದಿಂದ ಫುಲ್ ಹೆಚ್‌ಡಿ ವಿಡಿಯೋ ರಿಕಾರ್ಡಿಂಗ್ ಮಾಡಬಹುದಾಗಿದೆ.
ಈ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ 5 ಇಂಚಿನದ್ದಾಗಿದ್ದು ಮತ್ತು ಇದರ ರಿಜಾಲ್ಯೂಶನ್ 800X480 ಪಿಕ್ಸಲ್ ಇದೆ. ಈ ಸ್ಮಾರ್ಟ್‌ಫೋನ್ 1.2 ಜಿಎಚ್‌ಜೆಡ್ ಡ್ಯುವೆಲ್ ಕೊರ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 1 ಜಿಬಿ ರ್ಯಾಮ್ ಮತ್ತು 8 ಜಿಬಿ ಇಂಟರ್‌ನಲ್ ಸ್ಟೋರೆಜ್ ಇದೆ. ಇದರ ಹೊರತು ಈ ಸ್ಮಾಟ್‌ಪೋನ್‌ನಲ್ಲಿ 64 ಜಿಬಿಯವರೆಗಿನ ಮೆಮೊರಿ ಕಾರ್ಡ ಬಳಸಬಹುದಾಗಿದೆ.
ಈಸ್ಮಾಟ್‌ಫೊನ್‌ನಲ್ಲಿ 3ಜಿ(21ಎಮ್‌ಬಿಪಿಎಸ್) , ವೈಫೈ , ಮೈಕ್ರೊ ಯುಎಸ್‌ಬಿ , ಜಿಪಿಎಸ್, 3.5 ಎಮ್‌ಎಮ್ ಅಡಿಯೋ ಚೆಕ್ ಮತ್ತು ಬ್ಲ್ಯೂಟೂಥ್ 4.0 ಇದೆ. ಇದರಲ್ಲಿ ಎಕ್ಸಿಲರೆಮಿಟರ್ ಮತ್ತು ಮ್ಯಾಗ್ನೆಟಿಕ್ ಸೆನ್ಸಾರ ಕೂಡ ಇದೆ. ಇದರ ಬ್ಯಾಟರಿ ಸಾಮರ್ಥ್ಯ 2100 ಎಮ್‌ಎಎಚ್ ಇದೆ. ಇದು 3ಜಿ ನೆಟವರ್ಕ್ ಮೂಲಕ 10 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ 18,499 ರೂಪಾಯಿ ಇದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.