ಸಿಹಿ ಸುದ್ದಿ : ಕಡಿಮೆಯಾಗಲಿದೆ ಪೆಟ್ರೋಲ್‌ ಬೆಲೆ

ಮಂಗಳವಾರ, 15 ಏಪ್ರಿಲ್ 2014 (18:38 IST)
PR
ನಿಮಗಾಗಿ ಒಂದು ಶುಭ ಮತ್ತು ಸಿಹಿ ಸುದ್ದಿಯೊಂದಿದೆ. ಪೆಟ್ರೊಲ್‌ ಬೆಲೆಯಲ್ಲಿ ಇಳಿಕೆಯ ಲಕ್ಷಣಗಳಿವೆ. ಅತಿ ಶೀಘ್ರದಲ್ಲಿ ಪೆಟ್ರೋಲ್‌ ಕಂಪೆನಿಗಳು ತೈಲ ಬೆಲೆಯಲ್ಲಿ ಇಳಿಕೆ ಮಾಡಲಿವೆ. ಇದೇ ವಾರ ಪೆಟ್ರೋಲ್‌‌ ಬೆಲೆಯಲ್ಲಿ 1 ರೂಪಾಯಿ ಇಳಿಕೆಯಾಗುವ ಸಾಧ್ಯತೆಗಳಿವೆ. ಆದರೆ ಯಾವುದೇ ಅಧಿಕಾರಿಗಳು ಈ ಮಾಹಿತಿ ನೇರವಾಗಿ ನೀಡಿಲ್ಲ. ಆದರೆ ಈ ವಿಷಯ ಚರ್ಚೆಯಲ್ಲಿದೆ. ಇದಕ್ಕು ಮೊದಲು ಕಳೆದ ವರ್ಷದಲ್ಲಿ ಪೆಟ್ರೋಲ್‌‌ಬೆಲೆಯಲ್ಲಿ 75 ಪೈಸೆ ಕಡಿತಗೊಳಿಸಲಾಗಿತ್ತು.

ಇಂಡಿಯನ್‌ ಆಯಿಲ್‌‌‌ ಕಾರ್ಪೋರೆಶನ್‌ (ಐಒಸಿ), ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌‌(ಬಿಪಿಸಿಎಲ್‌‌) ಮತ್ತು ಹಿಂದುಸ್ಥಾನ ಪೆಟ್ರೋಲ್‌ ಕಾರ್ಪೋರೇಶನ್‌‌‌ ಲಿಮಿಟೆಡ್‌‌‌(ಹೆಚ್‌‌‌‌‌‌ಪಿಸಿಎಲ್‌‌‌)ಗಳು ಪೆಟ್ರೋಲ್‌ ಬೆಲೆಯಲ್ಲಿ ಇಳಿಕೆ ಮಾಡಲಿವೆ ಎಂದು ಆಯಿಲ್‌‌ ಮಾರ್ಕೆಟಿಂಗ್‌‌‌ ಕಂಪೆನಿಯ ವರಿಷ್ಠ ಅಧಿಕಾರಿಗಳು ತಿಳಿಸಿದ್ದಾರೆ.

ಡಾಲರ್‌‌ ಎದುರು ರೂಪಾಯಿ ಚೇತರಿಕೆ ಕಂಡ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಇದರಿಂದ ಪೆಟ್ರೋಲ್‌ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಕಳೆದ 15 ದಿನಗಳ ಹಿಂದೆ ಕಚ್ಚಾ ತೈಲಬೆಲೆಯಲ್ಲಿ 46 ಪೈಸೆ ಇಳಿಕೆಯಾಗಿತ್ತು ಡಾಲರ್‌ ಎದುರು ರೂಪಾಯಿ 83 ಪೈಸೆ ಚೇತರಿಕೆ ಕಂಡಿತ್ತು. ಇದರಿಂದ ಪೆಟ್ರೋಲ್‌ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ