ಈ ವರ್ಷ ದುಬಾರಿಯಾಗಲಿವೆ ಮಾವಿನ ಹಣ್ಣಿನ ದರ

ಬುಧವಾರ, 16 ಏಪ್ರಿಲ್ 2014 (17:10 IST)
PR
ಈಗ ಮಾವಿನ ಹಣ್ಣಿನ ಸೀಜನ್‌ ಪ್ರಾರಂಭವಾಗಿದೆ. ಈ ವರ್ಷ ಮಾವಿನ ಹಣ್ಣಿನ ಬೆಲೆ ಹೆಚ್ಚಳ ಆಗುವ ಸಾಧ್ಯತೆಗಳು ಇವೆ. ಕಳೆದ ತಿಂಗಳು ಬಂದ ಮಳೆಯಿಂದ ಶೇ.20 ಕ್ಕಿಂತ ಕಡಿಮೆ ಮಾವು ಬೆಳೆದಿವೆ.

ಇದರ ಹೊರತು ಸಂಯುಕ್ತ ಅರಬ್‌‌‌ , ಬ್ರಿಟನ್‌‌ , ಕತರ್‌, ಕುವೈತ್‌ , ಬಾಂಗ್ಲಾದೇಶ ಮತ್ತು ಇತರ ದೇಶಗಳಿಂದ ಮಾವು ಖರೀದಿ ಹೆಚ್ಚಳವಾಗುವ ಕಾರಣ ಸ್ವದೇಶಿ ಮಾರುಕಟ್ಟೆಯಲ್ಲಿ ಮಾವಿನ ಪೂರೈಕೆ ಕಡಿಮೆಯಾಗಲಿವೆ. ಪೂರೈಕೆ ಕಡಿಮೆ ಆದ ಕಾರಣ ಬೇಡಿಕೆಯಲ್ಲಿ ಹೆಚ್ಚಳವಾಗುತ್ತದೆ ಇದರಿಂದ ಬೆಲೆ ಕೂಡ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಆಂದ್ರ ಪ್ರದೇಶ, ಬಿಹಾರ್ , ಗುಜರಾತ್ , ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ವಾತಾವರಣದ ವಿರುದ್ದ ಮಳೆಯಾದ ಕಾರಣ ಶೇ.50 ಕ್ಕಿಂತ ಹೆಚ್ಚನ ಮಾವಿನ ಗಿಡಗಳಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಮಾವು ಬೆಳೆಯಲಾಗುತ್ತದೆ. ಇದರಲ್ಲಿ ಆಂದ್ರಪ್ರದೇಶ ಮತ್ತು ಉತ್ತರ ಪ್ರದೇಶದದಲ್ಲಿ ಶೇ.50 ರಷ್ಟು ಮಾವು ಬೆಳೆಯಲಾಗುತ್ತದೆ. ಇದರಿಂದ ಬೆಲೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಳೆದ ವರ್ಷ 180 ಲಕ್ಷ ಟನ್‌ ಮಾವು ಬೆಳೆಯಲಾಗಿತ್ತು.

ವೆಬ್ದುನಿಯಾವನ್ನು ಓದಿ