ಹೆಚ್ಚು ಕಾಲ ಸ್ಮಾರ್ಟ್‌‌‌ಫೊನ್‌‌ ಬಳಸಿದರೆ ಕಣ್ಣಿಗೆ ಅಪಾಯವಂತೆ

ಬುಧವಾರ, 16 ಏಪ್ರಿಲ್ 2014 (17:13 IST)
PR
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌‌‌ಫೋನ್‌ ಬಳಕೆ ಹೆಚ್ಚುತ್ತಲಿದೆ. ದಿನದಲ್ಲಿ ಹೆಚ್ಚಿನ ಬಾರಿ ಸ್ಮಾರ್ಟ್‌‌ಫೋನ್‌‌ ಬಳಕೆದಾರರಿಗೆ ಒಂದು ಕೆಟ್ಟ ಸುದ್ದಿ ಇದೆ. ಆಫ್ಟಿಶೀಯನೋ (ಕನ್ನಡಕ ಉತ್ಪಾದಿಸುವ ಕಂಪೆನಿ) ಅನುಸಾರ ಸ್ಮಾಟ್‌‌‌‌‌ಫೋನ್ ಬಳಕೆಯಿಂದ ಕಣ್ಣಿಗೆ ಅಪಾಯವಂತೆ.

ಆಫ್ಟಿಶೀಯನೋ 2,000 ಸ್ಮಾರ್ಟ್‌‌‌ಫೋನ್ ಬಳಕೆದಾರರ ಮೇಲೆ ಸಂಶೋಧನೆಯನ್ನು ನಡೆಸಿತ್ತು, ಈ ಆಧ್ಯಯನದಲ್ಲಿ ತಿಳಿದು ಬಂದ ವಿಷಯವೇನೆಂದರೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್‌‌‌ಫೋನ್‌ ಬಳಕೆ ಮಾಡುತ್ತಾರೆ. ಈ ಯುವ ಜನರು ದಿನಕ್ಕೆ 32 ಬಾರಿ ಸ್ಮಾಟ್‌‌‌‌ ಫೋನ್‌ ಬಳಕೆ ಮಾಡುತ್ತಾರಂತೆ.

ಸ್ಮಾರ್ಟ್‌‌‌ಫೋನ್‌ ಅಷ್ಟೆ ಅಲ್ಲ ಕಂಪ್ಯೂಟರ್‌ , ಟ್ಯಾಬ್ಲೆಟ್‌‌‌ ಮತ್ತು ಫ್ಲೆಟ್‌ ಸ್ಕ್ರೀನ್‌ ಟಿವಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಕಣ್ಣಿನ ಮೇಲೆ ಸಾಕಷ್ಟು ದುಷ್ಪರಿಣಾಮ ಬಿರುತ್ತದೆ.

" ಸ್ಮಾರ್ಟ್‌‌‌‌‌ಫೋನ್‌‌‌‌‌‌ನ ಸ್ಕ್ರೀನ್‌‌ನಿಂದ ಹೊರ ಬರುವ ನೀಲಿ ಬೆಳಕು ನಮ್ಮ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ" ಎಂದು ಆಫ್ಟಿಶೀಯನೋದ ಎಂಡಿ ಹೆಪವರ್ಥ್ ತಿಳಿಸಿದ್ದಾರೆ. ಇನ್ನು ಮುಂದೆ ಸ್ಮಾರ್ಟ್‌ಪೋನ್‌ ಬಳಕೆ ಹೆಚ್ಚು ಮಾಡಬೇಡಿ , ಸಾಧ್ಯವಾದಷ್ಟು ಕಡಿಮೆ ಮಾಡಿ , ಇಲ್ಲದಿದ್ದರೆ ನಿಮ್ಮ ಕಣ್ಣುಗಳನ್ನು ಕಳೆದುಕೊಳ್ಳಬೇಕಾಗುಯತ್ತದೆ.

ವೆಬ್ದುನಿಯಾವನ್ನು ಓದಿ