ಈ ವರ್ಷ ಟಿಸಿಎಸ್‌‌‌ನಲ್ಲಿ ಬಂಪರ್‌‌ ಜಾಬ್‌‌ಗಳ ಸುಗ್ಗಿ

ಶುಕ್ರವಾರ, 18 ಏಪ್ರಿಲ್ 2014 (16:54 IST)
PR
ಟಾಟಾ ಕನ್ಸ್‌ಲ್‌‌ಟೆನ್ಸಿ ಸರ್ವಿಸೆಜ್‌‌ ಪ್ರಸಕ್ತ ವಿತ್ತ ವರ್ಷದಲ್ಲಿ 55,000 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಿದೆ ಮತ್ತು ಇದರಲ್ಲಿ 25,000 ಉದ್ಯೋಗಿಗಳು ಫ್ರೆಶರ್‌‌‌‌ ಆಗಿದ್ದಾರೆ.

" ಈ ವರ್ಷ ನಾವು 55,000 ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವ ಯೋಜನೆ ಮಾಡಿದ್ದೇವೆ. ಇದರಲ್ಲಿ ಮೊದಲು 25000 ಫ್ರೆಶರ್‌‌‌‌ ಅಭ್ಯರ್ಥಿಗಳನ್ನು ಕ್ಯಾಂಪಸ್‌ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳುವುದು. ಕಳೆದ ವರ್ಷದಲ್ಲಿ ಕಂಪೆನಿಯ ನಿವ್ವಳ ಲಾಭ ಶೇ.48 ರಷ್ಟು ಹೆಚ್ಚಳವಾಗಿದೆ." ಎಂದು ಕಂಪೆನಿಯ ಕಾರ್ಯಕಾರಿ ಉಪಾದ್ಯಕ್ಷ ಅಜಯ್‌ ಮುಖರ್ಜಿ ತಿಳಿಸಿದ್ದಾರೆ.

" 2014ರ ವಿತ್ತ ವರ್ಷದಲ್ಲಿ ಕಂಪೆನಿ 61,200 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಗ ಕನಿಷ್ಠ 50 ಸಾವಿರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ, ಇದರಲ್ಲಿ 24, 268 ಫ್ರೆಶರ್‌‌‌‌ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು" ಎಂದು ಟಿಸಿಎಸ್‌‌‌‌ನ ಪ್ರಧಾನ ನಿರ್ಧೇಶಕ ಚಂದ್ರಶೇಖರನ್‌‌ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ