ಅರ್ಧದಷ್ಟು ಜನರು ಟ್ವಿಟರ್‌ನಲ್ಲಿ ಟ್ವಿಟ್‌ ಮಾಡುವುದಿಲ್ಲವಂತೆ !

ಶುಕ್ರವಾರ, 18 ಏಪ್ರಿಲ್ 2014 (16:58 IST)
PR
ಟ್ವಿಟರ್‌‌ ಅಕೌಂಟ್‌ ಓಪನ್‌ ಮಾಡಿದವರಲ್ಲಿ ಶೇ.50 ರಷ್ಟು ಜನರು ಟ್ವಿಟ್‌‌‌‌‌ ಮಾಡುವುದೇ ಇಲ್ಲವಂತೆ. ಯಾವಾಗಲಾದರೂ ಕೂಡ ಎನನ್ನು ಕೂಡ ಪೋಸ್ಟ್ ಮಾಡುವುದಿಲ್ಲವಂತೆ. ಟ್ವಿಟರ್‌‌‌‌‌ ಬಳಕೆ ಆದಾರದ ಮೇಲೆ ನಿಗಾ ಇಡುವ ಸಂಸ್ಥೆ ಟ್ವೊಪ್‌ಚಾರ್ಟ್ಸ್‌‌‌‌‌ ಈ ಮಾಹಿತಿ ತಿಳಿಸಿದೆ. ಟ್ವಿಟರ್ ಬಳಕೆದಾರಲ್ಲಿ ಅರ್ಧದಷ್ಟು ಜನರು ಅಂದರೆ ಶೇ.44 ರಷ್ಟು ಜನರು ಯಾವಾಗಲೂ ಎನನ್ನೂ ಪೋಸ್ಟ್ ಮಾಡುವುದಿಲ್ಲ ಎಂದು ಟ್ವೊಪ್‌ಚಾರ್ಟ್ಸ್‌‌‌‌‌ ತಿಳಿಸಿದೆ.

ತಿಂಗಳಿನ ಆಧಾರದ ಮೇಲೆ 24 ಕೋಟಿ 40 ಲಕ್ಷ ಎಕ್ಟಿವಿಟಿ ಯೂಸರ್‌‌ ಇದ್ದಾರೆ ಎಂದು ಟ್ವಿಟರ್‌‌‌ ಫೆಬ್ರುವರಿಯಲ್ಲಿ ತಿಳಿಸಿದೆ. ಈ ಜನರು ಹೆಚ್ಚಿನ ಪ್ರಮಾಣದಲ್ಲಿ ಟ್ವಿಟ್‌ ಮಾಡುತ್ತಾರೆ. ಶೇ.47 ರಷ್ಟು ಜನರು ಟ್ವಿಟರ್‌‌‌ನಲ್ಲಿ ತಮ್ಮ ಪ್ರೊಪೈಲ್‌‌‌ನ ಇಮೇಜ್‌‌ ಹಾಕಿದ್ದಾರೆ ಮತ್ತು ತಮ್ಮ ಎಲ್ಲಾ ಸ್ವ ವಿವರ ನೀಡಿದವರು ಶೇ.24 ರಷ್ಟು ಜನರಿದ್ದಾರೆ ಎಂದು ಟ್ವೊಪ್‌ಚಾರ್ಟ್ಸ್‌‌‌‌‌ ತಿಳಿಸಿದೆ.

ಮ್ಯೂಜಿಕ್‌ ಆರ್ಟಿಸ್ಟ್‌‌ ‌‌ ಕೆಟಿ ಪೆರಿಯ ಟ್ವಿಟರ್‌‌‌‌ನಲ್ಲಿ ಅತಿ ಹೆಚ್ಚಿನ ಜನರು ಫಾಲೋ ಮಾಡುತ್ತಾರೆ ಮತ್ತು ಇವರಿಗೆ 5 ಕೋಟಿ ಫಾಲೋವರ್‌‌ಗಳಿದ್ದಾರೆ. ಟ್ವಿಟರ್‌ ಬಳಸುವವರಲ್ಲಿ ಶೇ.30ರಷ್ಟು ಜನರು ಒಂದರಿಂದ 10 ಟ್ವಿಟ್‌‌ ಗಳನ್ನು ಮಾಡುತ್ತಲಿರುತ್ತಾರೆ. ಆದರೆ ನೂರಕ್ಕಿಂತ ಹೆಚ್ಚಿನ ಟ್ವಿಟ್‌‌‌‌‌ ಮಾಡುವವರ ಸಂಖ್ಯೆ ಶೇ.13 ರಷ್ಟು ಇದ್ದಾರೆ.

ವೆಬ್ದುನಿಯಾವನ್ನು ಓದಿ