ಈಗ ಕಡಿಮೆ ದರದಲ್ಲಿ ಖರೀದಿಸಿ ಎಲ್‌‌ಸಿಡಿ , ಎಲ್‌‌ಇಡಿ ಟಿವಿ

ಶುಕ್ರವಾರ, 18 ಏಪ್ರಿಲ್ 2014 (17:03 IST)
PR
ಗೃಹೋಪಕರಣ ತಯಾರಿಕೆ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಹೊಸ ರಣನೀತಿ ಸಿದ್ದ ಪಡಿಸಿದೆ. ಈ ಸಲ ಕಂಪೆನಿಗಳು ಎಲ್‌‌ಇಡಿ ಮತ್ತು ಎಲ್‌‌ಸಿಡಿ ಟಿವಿಗಳ ಬೆಲೆಯಲ್ಲಿ ಇಳಿಕೆ ಮಾಡಿವೆ.

ದೇಶದ ದೊಡ್ಡ ಟಿವಿ ಸೆಟ್‌‌ ಉತ್ಪಾದಿಸುವ ಕಂಪೆನಿಗಳಾದ ಸೋನಿ, ಪ್ಯಾನಾಸೋನಿಕ್‌ ಮತ್ತು ವಿಡಿಯೋಕಾನ್ ಕಂಪೆನಿಗಳು ತಮ್ಮ ಟಿವಿ ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿವೆ.

ಜಪಾನ್ ಕಂಪೆನಿಯಾದ ಸೋನಿ ಭಾರತದಲ್ಲಿ ಮೊದಲ ಬಾರಿ 22 ಇಂಚಿನ ಎಲ್‌‌ಇಡಿ ಟೆಲಿವಿಜನ್‌‌‌ ಸೆಟ್‌‌
ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸೈಜ್‌ನ ಟಿವಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ. ವಿಡಿಯೋಕಾನ್ ಶೀಘ್ರದಲ್ಲಿ ಕೇವಲ 8000 ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಮಾಡೆಲ್‌ ಬಿಡುಗಡೆ ಮಾಡಲಿವೆ. ಈಗ ಎಲ್‌‌ಇಡಿ ಮತ್ತು ಎಲ್‌‌ಸಿಡಿಗಳ ಪ್ರಾರಂಭಿಕ ಬೆಲೆ 9,900 ರೂಪಾಯಿ ಇದೆ.

ವೆಬ್ದುನಿಯಾವನ್ನು ಓದಿ