ಈಗ ಅಮೇರಿಕಾದಲ್ಲಿ ಲಭ್ಯವಿರಲಿದೆ ಅಮುಲ್‌‌ ಶ್ರೀಖಂಡ್‌‌‌

ಶನಿವಾರ, 19 ಏಪ್ರಿಲ್ 2014 (16:48 IST)
PR
ದೇಶದ ಅತಿ ದೊಡ್ಡ ಡೈರಿ ಬ್ರ್ಯಾಂಡ್‌‌‌‌ ಅಮುಲ್‌‌ನ ಉತ್ಪಾದನೆಯಾದ ಶ್ರೀಖಂಡ್‌ ಈಗ ಅಮೆರಿಕಾದಲ್ಲೂ ಕೂಡ ಲಭ್ಯವಾಗಲಿದೆ. ಶ್ರೀಖಂಡ್‌ ಎನ್ನುವುದು ಡೈರಿಯ ಸ್ವೀಟ್‌‌ ಉತ್ಪಾದನೆಯಾಗಿದೆ. ಶ್ರೀಖಂಡ್‌‌‌ವನ್ನು ಮೊಸರಿನಿಂದ ತಯಾರಿಸಿರುತ್ತಾರೆ.

ಎನ್‌‌ಆರ್‌‌ಐ ವ್ಯವಹಾರಸ್ಥ ಪಿಯೂಷ್‌‌ ಜೆ ಪಟೇಲ್‌ ಸ್ವಾಮ್ಯದ ಒಂದು ಪ್ಲಾಂಟ್‌‌ನಲ್ಲಿ ಅಮುಲ್‌‌ನ ತುಪ್ಪ ಮತ್ತು ಪನಿರ್‌ ಉತ್ಪಾದನೆ ಮಾಡಲಾಗುತ್ತದೆ. ಈಗ ಈ ಸಾಲಿಗೆ ಶ್ರೀಖಂಡ್‌‌ ಕೂಡ ಸೇರಿದೆ.

ಅಮೆರಿಕಾದಲ್ಲಿ ಭಾರತೀಯ ಅಂಗಡಿಗಳಲ್ಲಿ ಅಮೂಲ್‌‌ ಉತ್ಪಾದನೆಗಳು ದುಬಾರಿಯಾಗಿವೆ ಎಂದು ಪಟೇಲ್‌‌ ತಿಳಿಸಿದ್ದಾರೆ. ಅಮೆರಿಕಾದಲ್ಲಿ 30 ಲಕ್ಷ ಅನಿವಾಸಿ ಭಾರತೀಯರು ಇದ್ದಾರೆ. ಇವರಿಗಾಗಿ ಮೊದಲ ಬಾರಿ ಅಮೆರಿಕಾದಲ್ಲಿ ಶ್ರೀಖಂಡ್‌ ಸಿಗಲಿದೆ. ಶ್ರೀಖಂಡ್‌‌ದ ಉತ್ಪಾದನೆ ಒಂದು ತಿಂಗಳಿಗಿಂತ ಮೊದಲೇ ಪ್ರಾರಂಭಿಸಲಾಗಿದೆ ಮತ್ತು ನನಗೆ ಶ್ರೀಖಂಡ ಎಂದರೆ ಇಷ್ಟ ಎಂದು ಪಟೇಲ್‌ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ಅಮೂಲ್‌ ಕಂಪೆನಿಯ ಘಟಕ ನಿರ್ಮಿಸಲಾಗಿದೆ. ಈ ಘಟಕ ಗುಜರಾತ್ ಸಹಕಾರಿ ಹಾಲು ವಿತರಣ ಮಹಾಸಂಘ , ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕ ಯೂನಿಯನ್‌ ಮತ್ತು ಎನ್‌‌‌ಆರ್‌‌ಐ ಮೂಲಕ ಈ ಹೊಸ ಘಟಕ ಪ್ರಾರಂಭಮಾಡಿದೆ. ಅಮೂಲ ಬ್ರ್ಯಾಂಡ್‌ ಗುಜರಾತ್ ಸಹಕಾರಿ ಹಾಲು ವಿತರಣ ಮಹಾಸಂಘ ಇದಾಗಿದೆ.

ವೆಬ್ದುನಿಯಾವನ್ನು ಓದಿ