ಪೆಟ್ರೋಲ್ ದರ ಏರಿಕೆಯಿಂದ ಕಂಗಾಲಾಗಿದ್ದೀರಾ, ಇಲ್ಲಿದೆ, ವಿದ್ಯುತ್‌ನಿಂದ ಚಲಿಸುವ ಸ್ಕೂಟರ್

ಶನಿವಾರ, 19 ಏಪ್ರಿಲ್ 2014 (17:42 IST)
PR
ದೇಶದ ದ್ವಿಚಕ್ರವಾಹನಗಳ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಮಹೀಂದ್ರಾ ಕಂಪೆನಿ, ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಮತ್ತಷ್ಟು ಹೆಚ್ಚಿಸಲು, ವಿವಿಧ ರೀತಿಯ ಮಾಡೆಲ್‌‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಕಂಪೆನಿಯ ಮೊದಲ ಇಲೆಕ್ಟ್ರಿಕ್‌‌ ಸ್ಕೂಟರ್‌ ಈ ವರ್ಷ ಅಮೆರಿಕಾದಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಕೂಟರ್‌‌‌ ಕ್ಯಾಲಿಫೋರ್ನಿಯಾದಲ್ಲಿ ಉತ್ಪಾದಿಸಲಾಗುತ್ತಿದೆ.

ಇತರ ಸ್ಕೂಟರ್‌‌‌‌‌‌ಗಳ ಮಾಡೆಲ್‌‌ಗಳಿಗಿಂತ ಮಹಿಂದ್ರಾ ಸ್ಕೂಟರ್‌‌ ವಿಭಿನ್ನ ರೀತಿಯಲ್ಲಿದೆ. ಸ್ಕೂಟರ್‌ನಲ್ಲಿ ಹೆಚ್ಚಿನ ಸ್ಥಳಾವಕಾಶ‌ ನೀಡಲಾಗಿದೆ. ಇದರಲ್ಲಿ ದಿನನಿತ್ಯ ಬಳಸುವ ವಸ್ತುಗಳನ್ನು ಸುಲಭದಲ್ಲಿ ಸಾಗಿಸಬಹುದಾಗಿದೆ. ಇದರ ಹೊರತು ಬುಟ್‌ ಕೆಸ್‌‌ನಲ್ಲಿ ಹೆಚ್ಚುವರಿಯಾಗಿ ಲ್ಯಾಪ್‌‌ಟಾಪ್‌ ಮತ್ತು ಮೊಬೈಲ್‌ ಚಾರ್ಜಿಂಗ್‌‌‌ ಮಾಡುವ ಸೌಲಭ್ಯವಿದೆ.

ಮಹಿಂದ್ರಾ ಜೆನೆಜ್ ಎಸ್‌ಟಿಎಸ್‌ನಲ್ಲಿ 1.4 ಕೆಡಬ್ಲ್ಯೂನ ಇಲೆಕ್ಟ್ರಿಕ್‌ ಮೋಟರ್‌‌‌ ಬಳಸಲಾಗಿದೆ. ಇದು 1.8 ಬಿಎಚ್‌‌ಪಿ ಪಾವರ್‌ ಸಾಮರ್ಥ್ಯದ ಮೋಟರ್‌‌ ಆಗಿದೆ. ಕಡಿಮೆ ಭಾರದ ಮತ್ತು ಕಾಂಪೆಕ್ಟ್ ಚೇಸಿಸ್‌‌ನ ಮೂಲಕ ಇದು ಪ್ರತಿ ಗಂಟೆಗೆ 50 ಕಿಲೋಮಿಟರ್‌ ಓಡುತ್ತದೆ.

ಅತಿ ಶೀಘ್ರದಲ್ಲಿ ಈ ಸ್ಕೂಟರ್‌‌ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುವ ವಿಶ್ವಾಸವಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ