5 ವಾರದಲ್ಲೇ ಗರಿಷ್ಠ ಅಂಶ ತಲುಪಿದ ಸೆನ್ಸೆಕ್ಸ್

ಮಂಗಳವಾರ, 17 ಜನವರಿ 2012 (18:45 IST)
ಕಳೆದ ಐದು ವಾರಗಳಲ್ಲೇ ಗರಿಷ್ಠ ಅಂಶ ತಲುಪಿರುವ ಮುಂಬೈನ ಬಿಎಸ್‌ಇ ಸೂಚ್ಯಂಕವು ದಿನದ ವಹಿವಾಟಿನಲ್ಲಿ 277 ಪಾಯಿಂಟ್ ಏರಿಕೆ ಕಂಡಿದೆ.

ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ಮತ್ತಷ್ಟು ಕ್ಷಿಪ್ರ ಗತಿಯಲ್ಲಿ ವೃದ್ಧಿ ಸಾಧಿಸಲಿದೆಯೆಂಬ ನಿರೀಕ್ಷೆಯಿಂದಾಗಿ ವಿದೇಶಿ ನಿಕ್ಷೇಪದ ಖರೀದಿ ಭರಾಟೆ ಕಂಡುಬಂದಿರುವುದು ಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ.

ಮಂಗಳವಾರದ ವಹಿವಾಟಿನಲ್ಲಿ ಶೇಕಡಾ 1.71ರಷ್ಟು ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 16,466.05 ಅಂಶಗಳಿಗೆ ತಲುಪಿದೆ. ಕಳೆದೆರಡು ವಹಿವಾಟಿನಲ್ಲಿ ಮಾರುಕಟ್ಟೆ 152 ಪಾಯಿಂಟ್ ಏರಿಕೆ ಕಂಡಿತ್ತು.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ 93.40 ಪಾಯಿಂಟ್ ಅಥವಾ ಶೇಕಡಾ 1.92ರಷ್ಟು ಏರಿಕೆ ಕಂಡು 4,967.30 ಅಂಶಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ