ಲಾಂಭಾಂಶ ಕಾಯ್ದಿರಿಸುವಿಕೆ; ಮಾರುಕಟ್ಟೆ ಕುಸಿತ

ಸೋಮವಾರ, 30 ಜನವರಿ 2012 (10:51 IST)
ಶೇರುದಾರರು ಲಾಂಭಾಂಶ ಕಾಯ್ದುರಿಸುವಿಕೆ ತಂತ್ರಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಶೇಕಡಾ 0.88ರಷ್ಟು ಕುಸಿತವನ್ನು ಅನುಭವಿಸಿದೆ.

ಏಷ್ಯಾ ಮಾರುಕಟ್ಟೆಯಲ್ಲಿ ದುರ್ಬಲ ವಹಿವಾಟು ವ್ಯಕ್ತವಾಗಿರುವುದು ಸಹ ಸೆನ್ಸೆಕ್ಸ್ ಹಿನ್ನಡೆಗೆ ಕಾರಣವಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ 152.94 ಪಾಯಿಂಟ್ ಕುಸಿತ ಅನುಭವಿಸಿರುವ ಸಂವೇದಿ ಸೂಚ್ಯಂಕವು 17,081.04 ಅಂಶಗಳಿಗೆ ತಲುಪಿದೆ.

ಕಳೆದ ಆರು ದಿನಗಳಲ್ಲಾಗಿ ಮಾರುಕಟ್ಟೆಯು 782.51 ಪಾಯಿಂಟುಗಳಷ್ಟು ಏರಿಕೆಯನ್ನು ಕಂಡಿತ್ತು. ಮತ್ತೊಂದೆಡೆ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 51.35 ಪಾಯಿಂಟ್ ಅಥವಾ ಶೇಕಡಾಯ 0.98ರಷ್ಟು ಕುಸಿತ ಅನುಭವಿಸಿ 5,153.35 ಅಂಶಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ