ಲಾಂಭಾಂಶ ಕಾಯ್ದಿರಿಸುವಿಕೆ; ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆ ಕುಸಿತ

ಗುರುವಾರ, 16 ಫೆಬ್ರವರಿ 2012 (11:36 IST)
ಹೂಡಿಕೆದಾರರು ಲಾಂಭಾಂಶ ಕಾಯ್ದಿದಿರಿಸುವಿಕೆಯ ತಂತ್ರಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು 59 ಪಾಯಿಂಟುಗಳಷ್ಟು ಕುಸಿತವನ್ನು ಕಂಡಿವೆ.

ಏಷ್ಯಾ ಮಾರುಕಟ್ಟೆಯಲ್ಲಿ ದುರ್ಬಲ ವಹಿವಾಟು ಸಹ ಮಾರುಕಟ್ಟೆ ಭಾವನೆಗೆ ಧಕ್ಕೆಯನ್ನುಂಟು ಮಾಡಿವೆ ಎಂದು ಶೇರು ತಜ್ಞರು ತಿಳಿಸಿದ್ದಾರೆ.

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.32ರಷ್ಟು ಕುಸಿತ ಅನುಭವಿಸಿರುವ ಸಂವೇದಿ ಸೂಚ್ಯಂಕವು 18,143.41 ಅಂಶಗಳಿಗೆ ತಲುಪಿದೆ. ತೈಲ, ಗ್ಯಾಸ್ ಸೇರಿದಂತೆ ಉಕ್ಕು ಶೇರುಗಳು ಸಹ ತೀವ್ರ ಒತ್ತಡದಲ್ಲಿ ಕಂಡುಬಂದಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಮುಂಬೈ ಮಾರುಕಟ್ಟೆ 454 ಪಾಯಿಂಟ್ ಏರಿಕೆಯನ್ನು ಕಂಡಿತ್ತು. ಮತ್ತೊಂದೆಡೆ 22.20 ಪಾಯಿಂಟ್ ಅಥವಾ ಶೇಕಡಾ 0.40ರಷ್ಟು ಕುಸಿತ ಅನುಭವಿಸಿರುವ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 5509.75 ಅಂಶಗಳಿಗೆ ಇಳಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ