ಸೆನ್ಸೆಕ್ಸ್: 22 ಸಾವಿರ ಗಡಿದಾಟಿದ ಸಂವೇದಿ ಸೂಚ್ಯಂಕ

ಗುರುವಾರ, 10 ಏಪ್ರಿಲ್ 2014 (14:06 IST)
PTI
ಏಷ್ಯಾ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡಿವೆ.

ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 358.89 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 66.86 ಪಾಯಿಂಟ್‌ಗಳ ಏರಿಕೆ ಕಂಡು 22,769.20 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 14.40 ಪಾಯಿಂಟ್‌ಗಳ ಏರಿಕೆ ಕಂಡು 6810.60 ಅಂಕಗಳಿಗೆ ತಲುಪಿದೆ.

ರಿಯಲ್ಟಿ, ವಾಹನೋದ್ಯಮ, ವಿದ್ಯುತ್, ತೈಲ ಮತ್ತು ಅನಿಲ, ಬಂಡವಾಳ ವಸ್ತುಗಳು ಮತ್ತು ಆರೋಗ್ಯ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿವೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.47 ರಷ್ಟು ಏರಿಕೆಯಾಗಿದೆ. ಏತನ್ಮಧ್ಯೆ, ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಶೇ.0.69 ರಷ್ಟು ಚೇತರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ