ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಒಳಯುದ್ಧಗಳು ಮುಂದುವರೆಯುತ್ತಿವೆ. ಬಿಹಾರದಲ್ಲಿ ಮೋದಿಯ ಕಟ್ಟಾ ಬೆಂಬಲಿಗ ಗಿರಿರಾಜ ಸಿಂಗ್ ಕೋಪಗೊಂಡಿದ್ದರೆ, ಪಂಜಾಬ್ ನಲ್ಲಿ ನವಜೋತ್ ಸಿಂಗ್ ಸಿದ್ದು ಕೂಡ ಪಕ್ಷದ ವಿರುದ್ಧ ಗುಡುಗಿದ್ದಾರೆ.
ಹಾಲಿ ಅಮೃತಸರದ ಸಂಸದರಾಗಿರುವ ಸಿದ್ದು, ಈ ಸಲವೂ ಅಲ್ಲಿಂದಲೇ ಕಣಕ್ಕಿಳಿಯಲು ಬಯಸುತ್ತಿದ್ದಾರೆ. ಆದರೆ ಪಾರ್ಟಿ ಅವರನ್ನು ಬೇರೆ ಕ್ಷೇತ್ರದಿಂದ ಆಖಾಡಕ್ಕಿಳಿಸಲು ಯೋಚಿಸುತ್ತಿದೆ. ಪಾರ್ಟಿ ಅವರಿಗೆ ಕುರುಕ್ಷೇತ್ರ ಅಥವಾ ಪೂರ್ವ ದೆಹಲಿಯ ಟಿಕೆಟ್ ನೀಡುವುದಾಗಿ ಹೇಳುತ್ತಿದೆ. ಆದರೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧು ಒಪ್ಪುತ್ತಿಲ್ಲ." ಸ್ಪರ್ಧಿಸುವುದಾದರೆ ಅಮೃತಸರದಿಂದ. ಇಲ್ಲವಾದರೆ ಕಣಕ್ಕಿಳಿಯಲಾರೆ" ಎಂಬುದು ಅವರ ಹಠ.
ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಅರುಣ ಜೆಟ್ಲಿ ಅವರನ್ನು ಅಮೃತಸರದಿಂದ ಕಣಕ್ಕಿಳಿಸಲು ಬಿಜೆಪಿ ಹವಣಿಸುತ್ತಿದೆ.