ಈ ಸಲದ ರಾಜ್ಯಸಭಾ ಚುನಾವಣೆಯಲ್ಲಿ ಹರಿಯಾಣಾದಿಂದ 6 ರಾಷ್ಟೀಯ ಪಕ್ಷಗಳು ಮತ್ತು 2 ರಾಜ್ಯ ಮಟ್ಟದ ಪಕ್ಷಗಳು ಸ್ಪರ್ಧಿಸುತ್ತಿವೆ. ಅಲ್ಲದೇ ಮಾನ್ಯತೆ ಪಡೆಯದ ರಾಜಕೀಯ 14 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯ ಚುನಾವಣಾ ಅಧಿಕಾರಿ ಶ್ರೀಕಾಂತ್ ವಾಲ್ಗದ್ ಪ್ರಕಾರ ಬಹುಜನ್ ಸಮಾಜವಾದಿ , ಭಾರತೀಯ ಜನತಾ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಹರಿಯಾಣಾದಲ್ಲಿರುವ ರಾಷ್ಟ್ರೀಯ ಪಕ್ಷಗಳಾಗಿವೆ.
ಹರಿಯಾಣ ಜನಹಿತ ಕಾಂಗ್ರೆಸ್ (ಬಿಎಲ್) ಮತ್ತು ಭಾರತೀಯ ರಾಷ್ಟ್ರೀಯ ಲೋಕದಳ ಪ್ರಾದೇಶಿಕ ಮಾನ್ಯತೆ ಪಡೆದ ರಾಜಕೀಯ ಪಕ್ಷದಳಾಗಿವೆ.
ಇವುಗಳ ಜತೆ 14 ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಅಲ್ಲಿ ಅಸ್ತಿತ್ವದಲ್ಲಿವೆ. ಅವು ಇಂತಿವೆ- 'ಆರಕ್ಷಣ ವಿರೋಧಿ ಪಕ್ಷ , ಭಾರತೀಯ ಲೋಕ ವಿಕಾಸ್ ಪಕ್ಷ, ಹರಿಯಾಣ ಪ್ರಜಾಪ್ರಭುತ್ವ ಪಕ್ಷ, ಹರಿಯಾಣ ಗರೀಬ್ ಪಿಛಡಾ ಯುವ ಸಂಘಟನೆ , ಹರಿಯಾಣ ನ್ಯಾಯ ಕಾಂಗ್ರೆಸ್ , ಜನಸಂಘರ್ಷ ದಳ ಹರಿಯಾಣ , ಹರಿಯಾಣ ಲೋಕದಳ , ಹರಿಯಾಣ ನವ ನಿರ್ಮಾಣ ಸೇನಾ, ಸಾಮಾಜಿಕ ನ್ಯಾಯ ಪಕ್ಷ, ಹರಿಯಾಣ ಮಾಸ್ ಪಕ್ಷ, ಹರಿಯಾಣ ಸ್ವತಂತ್ರ ಪಕ್ಷ , ರಾಷ್ಟ್ರವಾದಿ ಪರಿವರ್ತನಾ ಪಕ್ಷ, ಟೋಟಲ್ ವಿಕಾಶ ಪಕ್ಷ, ವಿಕಾಶ ಪರಿಷದ್' .