ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ದಂಪತಿ ಎನ್‌ಜಿಒ ಅಕ್ರಮ ಸತ್ಯ: ಸಿಎಜಿ

ಸೋಮವಾರ, 15 ಅಕ್ಟೋಬರ್ 2012 (11:48 IST)
ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಅವರ ಪತ್ನಿ ಲೂಯಿಸ್ ನಡೆಸುತ್ತಿರುವ ಡಾ.ಜಾಕೀರ್ ಹುಸೇನ್ ಮೆಮೋರಿಯಲ್ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಕೇಂದ್ರ ಲೆಕ್ಕ ಪರಿಶೋಧಕ ಸಮಿತಿ(ಸಿಎಜಿ) ಶನಿವಾರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ವರದಿಯಲ್ಲಿ ಡಾ.ಜಾಕೀರ್ ಹುಸೇನ್ ಮೆಮೋರಿಯನ್ ಟ್ರಸ್ಟ್‌ನಲ್ಲಿ 71.50ಲಕ್ಷ ರೂಪಾಯಿ ದುರ್ಬಳಕೆ ಆಗಿದೆ ಎಂದು ಸಿಎಜಿ ವರದಿ ತಿಳಿಸಿದೆ. ಉತ್ತರ ಪ್ರದೇಶ ಸರ್ಕಾರ ಎನ್‌ಜಿಒಗೆ ಸುಮಾರು 71.50 ಲಕ್ಷಗಳ ನೆರವನ್ನು ಮಾರ್ಚ್ 2010ರಲ್ಲಿ ನೀಡಿದ್ದು, ಬಿಡುಗಡೆಗೊಂಡ ಎಲ್ಲಾ ಹಣ ದುರ್ಬಳಕೆ ಆಗಿದೆ ಎಂದು ವರದಿ ವಿವರಿಸಿದೆ.

ಸಚಿವಾಲಯದಿಂದ ಎನ್‌ಜಿಒಗೆ ನೆರವು ನೀಡುವ ಸಂದರ್ಭದಲ್ಲಿ ಕೆಲವು ಏಜೆನ್ಸಿಗಳು ಸಹ ಕಮಿಷನ್ ಹೆಸರಿನಲ್ಲಿ ಹಣ ಪಡೆದಿವೆ ಎಂದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ. ಈ ಬಗ್ಗೆ ಅಂದು ಉತ್ತರ ಪ್ರದೇಶ ಸರ್ಕಾರ ಡಾ.ಜಾಕೀರ್ ಹುಸೇನ್ ಮೆಮೋರಿಯಲ್ ಟ್ರಸ್ಟ್‌ಗೆ ಚೆಕ್ ನೀಡುತ್ತಿರುವ ಭಾವಚಿತ್ರಗಳು ಲಭ್ಯವಿದೆ ಎಂದು ಸಿಎಜಿ ತಿಳಿಸಿದೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅರವಿಂದ ಕೇಜ್ರಿವಾಲ್, ಕೇಂದ್ರ ಸಚಿವ ಖುರ್ಷಿದ್ ಅವರು ನಡೆಸುತ್ತಿರುವ ಎನ್‌ಜಿಒನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ