ಮದುವೆ ಆಗಬೇಕೆಂದರೆ ದುಬಾರಿ ಬೆಲೆಯ ಬಟ್ಟೆ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಮೈಮೇಲೆ ಬಟ್ಟೆ ಹಾಕಿಕೊಳ್ಳದೆ , ಬೆತ್ತಲೇಯಾಗಿ ಮದುವೆ ಆಗಿದ್ದಾರೆ ಎಂದು ಹೇಳಿದರೆ ನಿವು ನಂಬಲಿಕ್ಕಿಲ್ಲ, ಆದರೆ ಇದು ಸತ್ಯ.
ಮದುವೆಯ ನಂತರ ಈ ದಂಪತಿಗಳು ಹೇಳುವುದೇನೆಂದರೆ, ನಾವು ನಮ್ಮ ಮದುವೆ ಸ್ವಲ್ಪ ಬೇರೆ ರೀತಿಯಲ್ಲಿ ಮದುವೆ ಮಾಡಿಕೊಳ್ಳಲುಇಚ್ಛಿಸಿದ್ದೆವು ಮತ್ತು ನಮ್ಮ ಮದುವೆ ಸದಾಕಾಲ ನೆನಪಿನಲ್ಲಿರಲು ಬಯಸುತ್ತೆವೆ. ಈ ಕಾರಣದಿಂದ ನಾವು ಬೆತ್ತಲೆಯಾಗಿ ಮದಯವೆಯಾಗಿದ್ದೇವೆ , ಇದೊಂದು ರಿಕಾರ್ಡ ಆಗುತ್ತದೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.
ಈ ಬೆತ್ತಲೆ ಮದುವೆ ಮಾಡಿಕೊಂಡ ಯುವ ಜೋಡಿಗಳು ಆಸ್ಟ್ರೇಲಿಯಾದವರಾಗಿದ್ದಾರೆ. ಇವರ ಹೆಸರು ಮೆಲಾನಿ ಸೆನೆರ್ ಮತ್ತು ರಿನಿ ಶೈನರ್ ಎಂದಿದೆ. ಇವರು ತಮ್ಮ ಮದುವೆಯನ್ನು ನೋಂದಾವಣೆ ಕಚೇರಿಯಲ್ಲಿ ನೊಂದಾಯಿಸಿದ್ದಾರೆ. ಪ್ರಾರಂಭದಿಂದ ನಾವು ನಮ್ಮ ಮದುವೆ ಬೇರೆ ರೀತಿಯಲ್ಲಿ ಮಾಡಿಕೊಳ್ಳಲು ಬಯಸಿದ್ದೆವು ಎಂದು ಮೆಲಾನಿ ತಿಳಿಸಿದ್ದಾರೆ.
ಈ ರೀತಿ ಬೆತ್ತಲೆಯಾಗಿ ಮದುವೆ ಆಗುವಾಗ ನಿಮಗೆ ಯಾವುದೇ ರೀತಿಯ ನಾಚಿಕೆ ಆಗಲಿಲ್ಲವೆ ಎಂದು ಮದುವೆಯ ನಂತರ ಈವರಿಗೆ ಕೇಳಲಾಯಿತು. ಆಗ ನಗುತ್ತಲೇ ಉತ್ತರಿಸಿದ ಈ ದಂಪತಿಗಳು ಇಲ್ಲ ನಮಗೆ ಯಾವುದೇ ರೀತಿಯ ನಾಚಿಕೆ ಇಲ್ಲ ಎಂದು ತಿಳಿಸಿದ್ದಾರೆ.