ಅರೆ ಇದೇನಿದು : 15 ವರ್ಷದ ನಂತರ ಊಟ ಮಾಡಿದಳೀಕೆ

ಶುಕ್ರವಾರ, 18 ಏಪ್ರಿಲ್ 2014 (16:47 IST)
PR
ಮನುಷ್ಯ ಜೀವಿಸ ಬೇಕಾದರೆ ನೀರು ಅವಶ್ಯಕವಾಗಿದೆ. ನೀರು ಕುಡಿಯುವುದನ್ನು ಬಿಟ್ಟರೆ ಕೆಲವೇ ದಿನಗಳಲ್ಲಿ ಅಸ್ವಸ್ಥರಾಗಿ ಸಾವು ಕೂಡ ಸಂಭವಿಸುತ್ತದೆ. ಅಷ್ಟೇ ಅಲ್ಲ ಊಟ ಮಾಡುವುದನ್ನು ಬಿಟ್ಟರೆ ಕೆಲವು ದಿನಗಳು ಅಥವಾ ತಿಂಗಳಲ್ಲಿ ಸಾವನ್ನು ಸಂಭವಿಸುತ್ತದೆ. ವೃತಗಳನ್ನು ಮಾಡಿದಾಗ ಒಂದು ದಿನ ಊಟ ಬಿಟ್ಟರೆ ಆಯಾಸವಾಗುತ್ತದೆ.

ಆದರೆ 20 ವರ್ಷದ ವರೆಗೂ ಊಟ. ಮಾಡದೆ ಬದುಕಿದ್ದಾಳೆ ಎಂದರೆ ನೀವು ನಂಬುತ್ತಿರಾ ? ಹೈನಾ ಲಿಟಿಲ್‌ 15 ವರ್ಷದವರೆಗೆ ಊಟವನ್ನು ಮಾಡದೆ ಬದುಕಿದ್ದಾಳೆ.

ಹೈನಾಗೆ ಚಿಕ್ಕ ವಯಸ್ಸಿನಿಂದಲೂ ಊಟ ಅಂದರೆ ಇಷ್ಟವಿರಲಿಲ್ಲವಂತೆ. ಆದರೆ ದಿನವಿಡೀ ಈಕೆ ತನಗೆ ಇಷ್ಟವಾದ ಚಿಪ್ಸ ಮಾತ್ರ ತಿನ್ನುತ್ತಿದ್ದಳಂತೆ. ಐದು ವರ್ಷದಲ್ಲಿರುವಾಗಲೇ ಈಕೆ ಚಿಪ್ಸ್‌ ತಿನ್ನಲು ಪ್ರಾರಂಭಮಾಡಿದಳು . ಪ್ರತಿದಿನಿ ಈಕೆ ಚಿಪ್ಸ್ ಬಿಟ್ಟು ಏನನ್ನೂ ಸೇವಿಸುತ್ತಿರಲಿಲ್ಲ.

ಊಟ ಬಿಟ್ಟಿದ್ದು ತಪ್ಪಾಗಿದೆ ಎಂದು 20 ವರ್ಷದ ನಂತರ ಈಕೆಗೆ ಅರಿವಾಗಿದೆಯಂತೆ ಇದರಿಂದ ಈಕೆ ಸಾಕಷ್ಟು ದುರ್ಬಲವಾಗಿದ್ದಳು ಮತ್ತು ಊಟ ಮಾಡುವುದನ್ನು ಮರೆತು ಹೊಗಿದ್ದಳು.

ವೆಬ್ದುನಿಯಾವನ್ನು ಓದಿ