ಈಕೆಯನ್ನು ಉಳಿಸಿದ್ದು ಒಂದು ಸೊಳ್ಳೆ ಮಾತ್ರ

ಶುಕ್ರವಾರ, 18 ಏಪ್ರಿಲ್ 2014 (18:49 IST)
PR
ಸೊಳ್ಳೆ ಕಚ್ಚುವುದರಿಂದ ಏನೆಲ್ಲ ಸಮಸ್ಯೆ ಉಂಟಾಗುತ್ತದೆ . ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಮತ್ತು ಡೆಂಗ್ಯೂ ಕೂಡ ಬರುತ್ತದೆ. ಸೊಳ್ಳೆ ಕಚ್ಚುವುದರಿಂದ ತುರಿಕೆ ಮತ್ತು ದೇಹದಲ್ಲಿ ಸಣ್ಣ ಪ್ರಮಾಣದ ಕೆಂಪು ಗಾಯ ವಾಗುತ್ತದೆ. ಈ ಹುಡುಗಿಗೆ ಕೂಡ ಸೊಳ್ಳೆ ಕಚ್ಚಿತ್ತು.

ಹುಡುಗಿಗೆ ಸೊಳ್ಳೆ ಕಚ್ಚಿದ ನಂತರ ಈಕೆಯ ತಾಯಿ ಅಷ್ಟೊಂದು ಗಮನ ಹರಿಸಲಿಲ್ಲ. ಆದರೆ ಕೆಲವು ದಿನಗಳು ಕಳೆದರು ಈಕೆಯ ಕೆನ್ನೆಯ ಗಾಯ ವಾಸವಾಗಿರಲಿಲ್ಲ ಮತ್ತು ಮುಖ ಕಪ್ಪಗಾಗಲು ಪ್ರಾರಂಭವಾಯಿತು. ಇದರಿಂದ ಈ ಹುಡುಗಿಯ ತಾಯಿ ಚಿಂತಿತಳಾದಳು.

ಹುಡುಗಿಯ ಮುಖ ಕಪ್ಪು ಆಗುತ್ತಾ ಹೊಯಿತು. ಇದನ್ನು ನೋಡಿದ ತಾಯಿಗೆ ಹೆದರಿಕೆ ಆಯಿತು. ಕೇವಲ ಒಂದು ಸೊಳ್ಳೆ ಕಚ್ಚುವುದರಿಂದ ಈ ತರಹ ದುಷ್ಪರಿಣಾಮ ಬೀರಿತು. ಇದನ್ನು ನೋಡಿದ ವೈದ್ಯರಿಗೂ ಕೂಡ ಆಶ್ಚರ್ಯ ಆಯಿತು.

ಈ ಹುಡುಗಿಯ ರಕ್ತ ಪರೀಕ್ಷೆ ಮಾಡಲಾಯಿತು. ಆಗ ವೈದ್ಯರಿಗೆ ಈಕೆಗೆ ಲ್ಯೂಕಿಮಿಯಾ ಇರುವುದು ಗೊತ್ತಾಯಿತು.

ಈ ಲ್ಯೂಕಿಮಿಯಾ ಕ್ಯಾನ್ಸರ್‌‌‌ ಈಕೆಗೆ ಇರುವುದನ್ನು ತಿಳಿದ ವೈದ್ಯರು ಕಿಮೊಥೇರೆಪಿಯ ಸಹಾಯದಿಂದ ಕ್ಯಾನ್ಸರ್‌‌ಗೆ ಉತ್ತಮ ಚಿಕಿತ್ಸೆ ನೀಡಲಾಯಿತು.

ಕ್ಯಾನ್ಸರ್‌ ಆದ ಕಾರಣ ಈಕೆಯ ಗಲ್ಲದ ಗಾಯ ಕಡಿಮೆ ಆಗಿಲ್ಲ ಮತ್ತು ತುರಿಕೆ ಕೂಡ ಹೆಚ್ಚಾಗಿದೆ ಎಂದು ವೈದ್ಯರು ತಾಯಿಗೆ ತಿಳಿಸಿದ್ದಾರೆ.

ಈ ಕ್ಯಾನ್ಸರ್‌ ಆಗಿರುವುದು ಬಹುಬೇಗ ಗೊತ್ತಾಗುವುದಿಲ್ಲ ಮತ್ತು ಹಂತ ಹಂತವಾಗಿ ಮನಷ್ಯನನ್ನು ಕೊಲ್ಲುತ್ತದೆ ಎಂದು ವೈದ್ಯರು ಹುಡುಗಿಯ ತಾಯಿಗೆ ತಿಳಿಸಿದ್ದಾರೆ.

ಆದರೆ ಸೊಳ್ಳೆ ಕಚ್ಚಿದ್ದು ಒಳ್ಳೆಯದೇ ಆಗಿದೆ, ಏಕೆಂದರೆ ಸೊಳ್ಳೆ ಕಚ್ಚದಿದ್ದರೆ ಈ ಕ್ಯಾನ್ಸರ್‌ ಪತ್ತೆ ಆಗಿರುತ್ತಿರಲಿಲ್ಲ. ಕಿಮಿಥೇರಿಪಿ ಚಿಕಿತ್ಸೆಯಿಂದ ಈ ಹುಡುಗಿ ಗುಣಮುಖಳಾದಳು.

ವೆಬ್ದುನಿಯಾವನ್ನು ಓದಿ