ಎಲ್ಲಕಡೆ ಮನುಷ್ಯರು ಮೇಯರ್ ಆಗುತ್ತಾರೆ . ಆದರೆ ಮೇಯರ್ ಆಗುವುದು ಸುಲಭದ ಮಾತಲ್ಲ . ಅದೃಷ್ಟ ಚೆನ್ನಾಗಿದ್ದರೆ ಮೇಯರ್ ಆಗಬಹುದು . ಆದರೆ ಇಲ್ಲೊಂದು ಕಡೆ ನಾಯಿ ಮೇಯರ್ ಆಗಿದೆ.
ಅಮೆರಿಕಾದ ಕೊಲೊರಾಡೊನ ಒಂದು ಸಣ್ಣ ಹಳ್ಳಿ ಡಿವಾಯಿಡ್ನಲ್ಲಿ ನಾಯಿ ಮೇಯರ್ ಆಗಿದೆ. ಆನ್ಲೈನ್ ಮೂಲಕ ಮತದಾನ ನಡೆದಿದೆ ಆಗ ಅತಿ ಹೆಚ್ಚು ಮತಗಳು ನಾಯಿಗೆ ಬಿದ್ದಿವೆ . ಆಗ ಈ ನಾಯಿ ಮೇಯರ್ ಪಟ್ಟಕ್ಕೇರಿದೆ.
ಪ್ರಾಣಿಗಳನ್ನು ಮೇಯರ್ ಮಾಡುವ ಈ ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಕೆಟಲ್ ಹೆಸರಿನ ನಾಯಿ ಬಹುಮತ ಗಳಿಸಿದೆ. ಈ ನಾಯಿಗೆ 2387 ಓಟುಗಳು ಬಿದ್ದಿವೆ.