ವಿಚಿತ್ರ ಆದರೂ ಸತ್ಯ : ಈ ಮಗುವಿಗಿವೆ 4 ಕೈ, 4 ಕಾಲು

ಶುಕ್ರವಾರ, 18 ಏಪ್ರಿಲ್ 2014 (19:11 IST)
PIB
ಚೀನಾದ ಕ್ವಾತೋಂಗ್‌ನಲ್ಲಿ ಒಂದು ವಿಚಿತ್ರ ಮಗುವೊಂದು ಜನಿಸಿದೆ. ಈ ಮಗುವಿಗೆ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿವೆ. ಜನರ ಮಧ್ಯೆ ಇದು ಕೌತಕದ ಮಾತಾಗಿದೆ. ಏಪ್ರಿಲ್‌ 2 ರಂದು ಈ ಮಗು ಜನಿಸಿದೆ. ಈ ಸುದ್ದಿ ಜನರಿಗೆ ತಲುಪಿದ ತಕ್ಷಣ ತಂಡೋಪ ತಂಡದಲ್ಲಿ ಜನರು ನೋಡಲು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ವೈದ್ಯರು ಹೆಚ್ಚಿನ ಅಂಗಗಳನ್ನು ತಗೆದಿದ್ದಾರೆ.

15 ದಿನಗಳ ಹಿಂದೆ ಜನಿಸಿದ ಈ ಮಗುವಿನ ಆರೊಗ್ಯ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಥಳಿಯ ಮಾಧ್ಯಮವೊಂದರ ಪ್ರಕಾರ ಈ ಮಗುವಿನ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಆರೊಗ್ಯ ಸ್ಥಿರವಾಗಿದೆ. ಈಕೆ ಐದು ಬಾರಿ ವೈದ್ಯರ ಹತ್ತಿರ ಹೋಗಿದ್ದಾಳೆ , ಆದರೆ ಈ ರೀತಿ ವಿಚಿತ್ರ ಮಗು ಇರುವುದು ವೈದ್ಯರಿಗೂ ಕೂಡ ಗೊತ್ತಾಗಲಿಲ್ಲವಂತೆ. ಆದರೆ ಮಗು ವಿಚಿತ್ರವಾಗಿ ಜನಿಸಿದ್ದನು ಕಂಡು ಸ್ವತಃ ವೈದ್ಯರೇ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಆದರೆ ಈ ಮಗು ವಿಚಿತ್ರವಾಗಿ ಜನಿಸಲು ನಾನೇ ಕಾರಣ ಎಂದು ಮಗುವಿನ ತಂದೆ ತಿಳಿಸಿದ್ದಾನೆ . ಏಕೆಂದರೆ, ಈತನು ತನ್ನ ಹೆಂಡತಿಗೆ ಸರಿಯಾದ ಸಮಯದಲ್ಲಿ ವೈದ್ಯರ ಹತ್ತಿರ ಕರೆದುಕೊಂಡು ಹೋಗಿರಲಿಲ್ಲವಂತೆ. ಈತ ಸದಾ ಕಾಲ ತನ್ನ ಕೆಲಸದಲ್ಲಿ ಬಿಜಿಯಾಗಿ ಇರುತ್ತಿದ್ದನು. ಆದರೆ ಈಗ ಚಿಂತಿಸುವ ಯಾವುದೇ ಅವಶ್ಯಕತೆ ಇಲ್ಲ. ವೈದ್ಯರು ನಡೆಸಿದ ಸರ್ಜರಿ ನಂತರ ಮಗು ಆರೋಗ್ಯವಾಗಿದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

ವೆಬ್ದುನಿಯಾವನ್ನು ಓದಿ