ಒಬ್ಬ ಮಹಿಳೆಗೆ ಸಿಗರೇಟು ಸೇದುವು ಚಟ ಇತ್ತು . ಆದರೆ ಒಂದು ಆಪಘಾತ ಆಕೆಯನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದೆ.
ಈಕೆಯ ಆರೊಗ್ಯಸ್ಥಿತಿ ಗಂಭೀರವಾಗಿದ್ದರಿಂದ ಆಕೆಗೆ ಕೃತಕ ಆಮ್ಲಜನಕ ವ್ಯವಸ್ಥೆ ಅಳವಡಿಲಾಗಿತ್ತು.
ಬ್ರಿಟನ್‌ನ ನಾರ್ಥ್ ಪ್ರದೇಶದ ಯಾರ್ಕ್‌ಶೈರ್‌ನಲ್ಲಿ ವಾಸ ಮಾಡುತ್ತಿರುವ 77 ವರ್ಷದ ಮಾರ್ಗೆಟ್ ವಯವರ್ಡ್‌ಗೆ ಅಪಘಾತದ ನಂತರ ಈಕೆಯ ಮುಖಕ್ಕೆ ಕೃತಕ ಉಸಿರಾಟಕ್ಕಾಗಿ ಮಾಸ್ಕ ಅಳವಡಿಸಲಾಗಿತ್ತು . ಆಗ ಈಕೆಗೆ ಸಿಗರೇಟು ಸೇದುವ ಬಯಕೆಯಾಯಿತಂತೆ.
ಇವಳು ಚೆನ್ ಸ್ಮೋಕರ್ ಆಗಿದ್ದಳು ಮತ್ತು ಸಿಗರೇಟು ಸೇದದೆ ಇರೊದಕ್ಕೆ ಆಕೆಗೆ ಸಾಧ್ಯವೇ ಆಗುತ್ತಿರಲಿಲ್ಲವಂತೆ.
ಆದರೆ ವೈದ್ಯರು ವೃದ್ಧೆಗೆ ಸಿಗರೇಟು ಸೇದಬೇಡ ಎಂದು ಹೇಳಿದ್ದರೂ ಕೂಡ ಈಕೆ ಕದ್ದು ಸಿಗರೇಟ ಸೇದಲು ಪ್ರಯತ್ನ ಪಟ್ಟಳು. ಆದರೆ ಈ ಪ್ರಯತ್ನ ತುಂಬಾ ಕಷ್ಟದ್ದಾಗಿತ್ತು.
ಆಕೆ ಸಿಗರೇಟಪ ಸೇದುವ ಸಂದರ್ಭದಲ್ಲಿ ಮುಖದ ಮಾಸ್ಕಗೆ ಸಿಗರೇಟಿನ ಬೆಂಕಿ ಹತ್ತಿದೆ , ಆಗ ಈಕೆಯ ಮುಖ ಸುಟ್ಟುಕೊಂಡಾಗ ಈಕೆ ಜನರನ್ನು ಕೂಗಿ ಕರೆದು ಸಹಾಯ ಕೇಳಿದಳು ಮತ್ತು ಆಕ್ಸಿಜನ್ ಟ್ಯಾಂಕ್ ಬಂದ ಮಾಡಲು ಪ್ರಯತ್ನ ಪಟ್ಟಳು.
ಆದರೆ ಜನರು ಓಡಿ ಹೊಗಿ ಆಕೆಯ ಹತ್ತಿರ ಬರುವಷ್ಟರಲ್ಲಿ ಆಕೆಯ ಜೀವ ಹೋಗಿತ್ತು.
ಈಕೆಯ ಮುಖ ಕೆಟ್ಟರೀತಿಯಲ್ಲಿ ಸುಟ್ಟು ಹೋಗಿತ್ತು ಮತ್ತು ಮಾಸ್ಕ್ ಒಳಡೆ ಸಿಗರೇಟು ಇರುವುದನ್ನು ಜನರಿಗೆ ಗೊತ್ತಾಗಿ ಬಿಟ್ಟಿತ್ತು .ಕೇವಲ ಒಂದೇ ಒಂದು ಸಿಗರೇಟಿನಿಂದ ಈಕೆ ಕ್ಷಣದಲ್ಲಿಯೇ ಸಾವನ್ನಪ್ಪಿದಳು.