ಹಿಂದು ಧರ್ಮದಲ್ಲಿ ಕಾಮದೇವನ್ನು ಪ್ರೇಮದ ದೇವರು ಎಂದು ನಂಬಲಾಗುತ್ತದೆ. ಮನುಷ್ಯನ ಹೃದಯದಲ್ಲಿ ಈ ಕಾಮದೇವ ಇರುತ್ತಾನೆ ಮತ್ತು ಕಾಮ ಹಾಗು ಪ್ರೇಮದ ಭಾವನೆ ಹೆಚ್ಚಿಸುತ್ತಾನೆ ಎಂದು ನಂಬಲಾಗುತ್ತದೆ. ಶಾಸ್ತ್ರಗಳ ಪ್ರಕಾರ , ವ್ಯಕ್ತಿಯ ದಾಂಪತ್ಯ ಜೀವನ ಪ್ರೇಮಮಯ ಮತ್ತು ಉಲ್ಲಾಸಮಯವಾಗಿರಲು ಬಯಸುತ್ತಾನೆ, ಅದಕ್ಕಾಗಿ ಶುಕ್ಲ ತ್ರಯೋದಶೀ ದಿನದಂದು ಕಾಮದೇವ ಮತ್ತು ಈತನ ಪತ್ನಿ ರತಿಯ ಜೊತೆ ಜೊತೆಗೆ ಶಿವಪಾರ್ವತಿಯರನ್ನೂ ಕೂಡ ಪೂಜೆ ಮಾಡಬೇಕಾಗುತ್ತದೆ.
ಶಾಸ್ತ್ರಗಳಲ್ಲಿ ಈ ದಿನವನ್ನು ಅನಂಗ ತ್ರಯೋದಶಿ ಎಂದು ಕರೆಯಲಾಗುತ್ತದೆ. ಈ ಕುರಿತು ಪುರಾಣಗಳಲ್ಲಿ ರೋಚಕ ಕತೆಯೊಂದಿದೆ.
ಕಾಮದೇವನ ಪತ್ನಿ ಪ್ರೇಮ ಸಲ್ಲಾಪ ಮಾಡಲು ಪ್ರಾರಂಭ ಮಾಡಿದಳು. ಆಗ ಶಿವನು ಈಕೆಗೆ ಹೇಳಿದ್ದೇನೆಂದರೆ , ನಿನ್ನ ಗಂಡ ಕೇವಲ ಶರೀರವಷ್ಟೆ ಅಲ್ಲ ಆತ ಶರೀರ ರಹಿತವಾಗಿ ನಿನ್ನ ಹತ್ತಿರ ಇರುವನು ಮತ್ತು ನೀನು ಮನುಷ್ಯನ ಹೃದಯದಲ್ಲಿ ಪ್ರವೇಶ ಮಾಡು ಹಾಗು ಪ್ರೇಮ ಮತ್ತು ಕಾಮ ಹೆಚ್ಚಿಸುವ ಕೆಲಸ ಮಾಡು ಇದರಿಂದ ಸೃಷ್ಠಿ ಚಕ್ರ ನಡೆಯುತ್ತದೆ ಎಂದು ಶಿವ ತಿಳಿಸಿದನಂತೆ.
ಈ ಸಮಯದಲ್ಲಿ ಕಾಮದೇವ ಮತ್ತು ರತಿಯನ್ನು ಶಿವನು ಆಶಿರ್ವಾದ ಮಾಡಿದನು ಮತ್ತು ಚೈತ್ರ ಶುಕ್ಲ ತೃಯೋದಶೀ ದಿನದಂದು ಕಾಮದೇವ ಮತ್ತು ರತಿ ಜೊತೆ ಜೊತೆಗೆ ಶಿವ ಪಾರ್ವತಿಯರನ್ನು ಪೂಜೆ ಮಾಡಿದರೆ, ದಂಪತಿಗಳ ಜೀವನ ಪ್ರೇಮಮಯ ಹಾಗು ಸುಖಮಯವಾಗಿರುತ್ತದೆ ಎಂದು ಶಿವನು ತಿಳಿಸಿದನು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ ಎನ್ನುವುದು ಪಂಡಿತರ ಹೇಳಿಕೆ.