ಜಪಾನ್‌ನಲ್ಲಿ ಪ್ರಬಲ ಭೂಕಂಪ

ಗುರುವಾರ, 24 ನವೆಂಬರ್ 2011 (18:59 IST)
ಜಪಾನ್‌ನಲ್ಲಿ ಗುರುವಾರ ಎರಡು ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿದ್ದರೂ ಇದರಿಂದ ಉಂಟಾಗಿರುವ ನಷ್ಟದ ಬಗ್ಗೆ ಮಾಹಿತಿ ದೊರೆತಿಲ್ಲ ಹಾಗೂ ಸುನಾಮಿಯ ಬಗ್ಗೆ ಮುನ್ಸೂಚನೆಯನ್ನೂ ನೀಡಲಾಗಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಟೋಕಿಯೋದಿಂದ ವಾಯುವ್ಯ ಭಾಗದ 750 ಕಿಲೋ ಮೀಟರ್‌ ದೂರದಲ್ಲಿರುವ ಹಾಗೂ ಸಮುದ್ರ 30 ಕಿಲೋ ಮೀಟರ್ ಆಳದಲ್ಲಿ ಭೂ ಕಂಪ ಕೇಂದ್ರೀಕೃತವಾಗಿತ್ತು ಎಂದು ಜಪಾನ್‌ ಹವಾಮಾನ ಇಲಾಖೆ ತಿಳಿಸಿದೆ.

ಜಪಾನ್‌ನಲ್ಲಿ ಎರಡು ಭೂಕಂಪಗಳು ಸಂಭವಿಸಿದರೂ ಫುಕುಶಿಮಾ ಡಾಯ್ಚಿಯಲ್ಲಿರುವ ಅಥವಾ ಬೇರೆ ಯಾವುದೇ ಅಣು ವಿದ್ಯುತ್‌ ಘಟಕಗಳಿಗೆ ಯಾವುದೇ ಹಾನಿಯಾಗಿಲ್ಲ.

ಕಳೆದ ಮಾರ್ಚ್‌‌ನಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪದಲ್ಲಿ ಫುಕುಶಿಮಾದಲ್ಲಿರುವ ಪರಮಾಣು ವಿದ್ಯುತ್‌ ಘಟಕಗಳಿಗೆ ತೀವ್ರ ಹಾನಿಯಾಗಿತ್ತು ಹಾಗೂ 20 ಸಾವಿರ ಜನರು ನಾಪತ್ತೆಯಾಗಿದ್ದರು. ಅಣು ವಿಕಿರಣಗಳ ಸೋರಿಕೆಯಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರು ಅನಿವಾರ್ಯವಾಗಿ ತಮ್ಮ ಮನೆಯನ್ನು ತ್ಯಜಿಸಬೇಕಾಗಿತ್ತು.

ವೆಬ್ದುನಿಯಾವನ್ನು ಓದಿ