ರಷ್ಯಾ ವಿಶ್ವದ 2ನೇ ದೊಡ್ಡ ಶಸ್ತ್ರಾಸ್ತ್ರ ಪೂರೈಕೆ ರಾಷ್ಟ್ರ

ಭಾನುವಾರ, 25 ಡಿಸೆಂಬರ್ 2011 (09:45 IST)
ರಷ್ಯಾ ಅಮೆರಿಕ ನಂತರದ ಪ್ರಪಂಚದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರ ಸರಬರಾಜು ಮಾಡುವ ರಾಷ್ಟ್ರವಾಗಿದೆ ಎಂದು ಮಾಸ್ಕೋ ಮೂಲದ ವಿಶ್ವ ಶಸ್ತ್ರಾಸ್ತ್ರ ಮಾರಾಟ ಚಿಂತಕರ ಚಾವಡಿ (ಸಿಎಡಬ್ಲ್ಯುಎಟಿ)ಯ ಮುಖ್ಯಸ್ಥ ಕೋರ್ಟೋಚೆನೆಕೋ ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಿಎಡಬ್ಲ್ಯುಎಟಿ ಬಿಡುಗಡೆ ಮಾಡಿರುವ ರ‌್ಯಾಂಕಿಂಗ್‌ನಲ್ಲಿ ರಷ್ಯಾ ಎರಡನೇ ಸ್ಥಾನ ಗಳಿಸಿದ್ದು, 2011 ನೇ ಸಾಲಿನಲ್ಲಿ ನಡೆಸಿದ ಶಸ್ತ್ರಾಸ್ತ್ರ ಮಾರಾಟದಿಂದ 1150 ಕೋಟಿ ರೂ. ಆದಾಯಗಳಿಸಿತ್ತು. ವಿಶ್ವಾದ್ಯಂತ ಶಸ್ತ್ರಾಸ್ತ್ರ ಮಾರಾಟದಿಂದ ಶೇ.16.1ಪಾಲು ಹೊಂದಿದೆ ಎಂದು ಕೋರ್ಟೋಚೆನೆಕೋ ತಿಳಿಸಿದ್ದಾರೆ.

2012 ನೇ ಸಾಲಿನಲ್ಲಿ ರಷ್ಯಾ ಜಾಗತಿಕ ಶಸ್ತ್ರಾಸ್ತ್ರ ಮಾರಾಟದಿಂದ 1000 ಕೋಟಿ ರೂ. ಅಥವಾ ಶೇ. 17.3ರಷ್ಟು ಪಾಲು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಶಸ್ತ್ರಾಸ್ತ್ರ ಮಾರಾಟದಿಂದಾಗಿ ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುವ ಅಮೆರಿಕ ಶೇ. 40ರಷ್ಟು ಪಾಲು ಹೊಂದಿದ್ದು, 1,30,760 ಕೋಟಿ ರೂ. ಆದಾಯ ಹೊಂದಿದೆ.

ವೆಬ್ದುನಿಯಾವನ್ನು ಓದಿ