ಮುಷ್ ಬಂಧನಕ್ಕೆ ನೆರವು ನೀಡಿ;ಪಾಕ್ ಇಂಟರ್‌ಪೋಲ್ ಮೊರೆ

ಗುರುವಾರ, 1 ಮಾರ್ಚ್ 2012 (16:08 IST)
PR
ಸ್ವಯಂ ಗಡಿಪಾರುಗೊಂಡು ವಿದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿ ಪರ್ವೆಜ್ ಮುಷರ್ರಫ್ ಅವರ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬೇಕೆಂದು ಪಾಕಿಸ್ತಾನದ ಅಧಿಕಾರಿಗಳು ಇಂಟರ್‌ಪೋಲ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರ್ರಫ್ ಅವರನ್ನು ಬಂಧಿಸಿ ಪಾಕಿಸ್ತಾನಕ್ಕೆ ಕರೆತಂದು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಪಾಕ್ ಮುಂದಾಗಿದೆ.

ಹಾಗಾಗಿಯೇ ಪಾಕಿಸ್ತಾನದಲ್ಲಿರುವ ಇಂಟರ್‌ಪೋಲ್ ನಿರ್ದೇಶಕರಿಗೆ ಮುಷರ್ರಫ್ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಕೋರಿ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಬುಧವಾರ ಮನವಿಯನ್ನು ಕಳುಹಿಸಿದೆ ಎಂದು ಮೂಲವೊಂದು ತಿಳಿಸಿದೆ.

ಮುಷರ್ರಫ್ ಅವರನ್ನು ಪಾಕಿಸ್ತಾನಕ್ಕೆ ಕರೆತರುವ ಸಲುವಾಗಿ ಈ ಪ್ರಕ್ರಿಯೆಗೆ ಮುಂದಾಗಿರುವುದಾಗಿ ಎಫ್ಐಎ ವಿಶೇಷ ಪ್ರಾಸಿಕ್ಟೂಟರ್ ಮೊಹಮ್ಮದ್ ಅಜಹರ್ ಚೌಧುರಿಯವರು ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆಂದು ವರದಿ ಹೇಳಿದೆ.

ವೆಬ್ದುನಿಯಾವನ್ನು ಓದಿ