ಜಪಾನ್‌ನಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಗುರುವಾರ, 15 ಮಾರ್ಚ್ 2012 (00:24 IST)
ಸದಾ ಭೂಕಂಪ ಮತ್ತು ಸುನಾಮಿಯಿಂದ ತತ್ತರಿಸುವ ಜಪಾನ್ ದೇಶದ ಉತ್ತರ ಭಾಗದಲ್ಲಿ ಬುಧವಾರ ಮತ್ತೆ ಪ್ರಬಲ ಭೂಕಂಪನ ಉಂಟಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಜಪಾನ್‌ನ ಪೆಸಿಫಿಕ್ ತೀರದಲ್ಲಿ ಅಲ್ಪ ಮಟ್ಟದ ಸುನಾಮಿ ಉಂಟಾಗುವ ಎಚ್ಚರಿಕೆಯನ್ನು ನೀಡಲಾಗಿದೆ.

ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8 ಇತ್ತು ಎಂದು ತಿಳಿದು ಬಂದಿದೆ. ಕಳೆದ ವರ್ಷ ಅಪ್ಪಳಿಸಿದ ಸುನಾಮಿಯಿಂದಲೇ ಉತ್ತರ ಜಪಾನ್ ತೀವ್ರವಾಗಿ ಹಾನಿಗೊಳಗಾಗಿದೆ. ಆಗಿನಿಂದ ಇದುವರೆಗೂ ಸಾವಿರಾರು ಬಾರಿ ಭೂಮಿ ನಡುಗಿದೆ. ಆದರೆ, ಪ್ರತಿಯೊಂದು ಬಾರಿ ಭೂಮಿ ನಡುಗಿದಾಗಲೂ ಭೂಕಂಪನದ ತೀವ್ರತೆ ತುಂಬಾ ಕಡಿಮೆ ಇತ್ತು ಎಂದು ವರದಿ ತಿಳಿಸಿದೆ.

ಜಪಾನ್‌ನ ದಕ್ಷಿಣ ಕುಶಿರೋದಿಂದ 235 ಕಿ.ಮೀ. ದೂರ ಇರುವ ಹೊಕ್ಕೈಡೋ ದ್ವೀಪದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡುಬಂದಿದೆ. ಆದರೆ, ಇಲ್ಲಿಂದ 450 ಕಿ.ಮೀ ದೂರ ಇರುವ ಟೋಕಿಯೋದಲ್ಲಿ ಭೂಕಂಪನದ ಅನುಭವ ಉಂಟಾಗಿಲ್ಲ.

ವೆಬ್ದುನಿಯಾವನ್ನು ಓದಿ