ತೆರಿಗೆ ವಂಚನೆ ಮಾಡಿದ ಬರ್ಲುಸ್ಕೋನಿಗೆ ವೃದ್ಧರ ಸೇವೆಗೆ ಆದೇಶ

ಮಂಗಳವಾರ, 15 ಏಪ್ರಿಲ್ 2014 (17:09 IST)
PR
PR
ಮಿಲಾನ್‌‌ನ ಇಟಲಿ ಕೋರ್ಟೊಂದು ಮಾಜಿ ಪ್ರಧಾನಮಂತ್ರಿ ಮತ್ತು ಬಿಲಿಯಾಧಿಪತಿ ಸಿಲ್ವಿಯೋ ಬರ್ಲುಸ್ಕೋನಿ ಅವರಿಗೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಸಮುದಾಯ ಸೇವೆಯನ್ನು ಮಾಡುವಂತೆ ಆದೇಶ ನೀಡಿದೆ. ಬರ್ಲುಸ್ಕೋನಿ ಚಲನವಲನಗಳ ಬಗ್ಗೆ ಕೂಡ ನಿಗಾವಹಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಸಂಸತ್ತಿನಿಂದ ಉಚ್ಚಾಟಿತರಾದ ಅವರು 6 ವರ್ಷಗಳವೆರೆಗೆ ನಿಷೇಧಿಸಲಾಗಿದೆ.ಬರ್ಲುಸ್ಕೋನಿ ಅವರಿಗೆ ಮಿಲಾನ್ ಹೊರಗೆ ಅವರ ಎಸ್ಟೇಟ್ ಬಳಿ ಅಂಗವಿಕಲ ಮತ್ತು ವೃದ್ಧ ನಾಗರಿಕರಿಗೆ ವಾರಕ್ಕೆ ಒಂದು ದಿನ ಸಮುದಾಯ ಸೇವೆಗೆ ಅವಕಾಶ ನೀಡಬೇಕೆಂದು ಬರ್ಲುಸ್ಕೋನಿ ವಕೀಲರು ಕೇಳಿದ್ದಾರೆಂದು ತಿಳಿದುಬಂದಿದೆ.

1990ರ ದಶಕದಲ್ಲಿ ಬರ್ಲುಸ್ಕೋನಿ ಅವರ ಮೀಡಿಯಾಸೆಟ್ ಬಿಸಿನೆಸ್ ಸಾಮ್ರಾಜ್ಯ ಟೆಲಿವಿಷನ್ ವಿತರಣೆ ಹಕ್ಕುಗಳ ಖರೀದಿಗೆ ಸಂಬಂಧಿಸಿದಂತೆ ತೆರಿಗೆ ವಂಚನೆ ಮಾಡಿದ ಆರೋಪಕ್ಕಾಗಿ ಕಳೆದ ವರ್ಷ ಶಿಕ್ಷೆ ನೀಡಲಾಗಿತ್ತು. ಆದರೆ ಅವರಿಗೆ 70 ವರ್ಷಗಳಾಗಿದ್ದರಿಂದ ಜೈಲು ವಾಸದ ಶಿಕ್ಷೆಯಿಂದ ಪಾರಾಗಿದ್ದರು. ಏಕೆಂದರೆ ಇಟಲಿಯಲ್ಲಿ 70ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಿನಾಯಿತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ