ಬ್ಲಡ್ ಹೌಂಡ್ ನಾಯಿಗೆ ಡಿವೈಡ್ ಪಟ್ಟಣದ ಮೇಯರ್ ಸ್ಥಾನ

ಬುಧವಾರ, 16 ಏಪ್ರಿಲ್ 2014 (17:27 IST)
PR
PR
ವಾಷಿಂಗ್ಟನ್: ಅಮೆರಿಕದ ಕೊಲೆರಾಡೊದ ಡಿವೈಡ್ ಪಟ್ಟಣದಲ್ಲಿ ಬ್ಲಡ್‌ಹೌಂಡ್ ನಾಯಿಯೊಂದು ಇನ್ನೂ 6 ನಾಯಿಗಳ ತೀವ್ರ ಪೈಪೋಟಿಯನ್ನು ಎದುರಿಸಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದೆ. ಅನಧಿಕೃತ ಪ್ರಶಸ್ತಿಗಾಗಿ ಒಂದು ಕತ್ತೆ, ಬೆಕ್ಕು ಮತ್ತು ಮುಳ್ಳುಹಂದಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪಾ ಕೆಟ್ಟಲ್ ಎಂಬ ಶೋಧ ಮತ್ತು ರಕ್ಷಣೆ ನಾಯಿ 2387 ಓಟುಗಳನ್ನು ಪಡೆದು ಆಯ್ಕೆಯಾಯಿತು. ತೋಳ ಕೆಯ್ನಿ 55 ಕಡಿಮೆ ಮತಗಳನ್ನು ಪಡೆದು ಡೆಪ್ಯೂಟಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದೆ.

ಬಸ್ಟರ್ ಎಂಬ ಹೆಸರಿನ ಬೆಕ್ಕು 1790 ಸ್ಥಾನಗಳಿಂದ ಮೂರನೇ ಸ್ಥಾನ ಪಡೆದಿದ್ದು, ವೈಸರಾಯ್ ಹುದ್ದೆಯನ್ನು ಅಲಂಕರಿಸಲಿದೆ.ಡಿವೈಟ್ ಪಟ್ಟಣಕ್ಕೆ ಯಾವುದೇ ಮಾನವ ಪೌರ ಮುಖಂಡ ಇಲ್ಲದಿರುವುದರಿಂದ ಟೆಲ್ಲರ್ ಕೌಂಟರ್ ಪ್ರಾದೇಶಿಕ ಎನಿಮಲ್ ಶೆಲ್ಟರ್ ಅನಧಿಕೃತ ಆನ್‌ಲೈನ್ ಸ್ಪರ್ಧೆ ನಡೆಸಿದ ನಿಧಿಯನ್ನು ಸಂಗ್ರಹಿಸುತ್ತದೆ. ಒಟ್ಟು 12, 091 ವೋಟುಗಳನ್ನು ಚಲಾಯಿಸಲಾಗಿದ್ದು, ಪ್ರತಿಯೊಬ್ಬರೂ ದತ್ತಿ ನಿಧಿಗೆ ಒಂದೊಂದು ಡಾಲರ್ ದೇಣಿಗೆ ನೀಡುತ್ತಾರೆ.ಪಾ ಕೆಟ್ಟಲ್ ಮೂರು ಕಾಲಿನ ಬೆಕ್ಕು ವಾಲ್ಟರ್ ಬದಲಿಗೆ ಆಯ್ಕೆಯಾಗಿದ್ದು, ವಾಲ್ಟರ್ ನಿವೃತ್ತಿಯಾಗುತ್ತಿದೆ. ಈ ವಾರದ ಕೊನೆಯಲ್ಲಿ ಮೇಯೋರಾಲ್ ಉದ್ಘಾಟನೆ ಸಮಾರಂಭ ನಡೆಯಲಿದೆ.

ವೆಬ್ದುನಿಯಾವನ್ನು ಓದಿ