ಮೌಂಟ್ ಎವೆರೆಸ್ಟ್‌ನಲ್ಲಿ ಹಿಮಪಾತಕ್ಕೆ 12 ಬಲಿ, 7 ಮಂದಿ ನಾಪತ್ತೆ

ಶನಿವಾರ, 19 ಏಪ್ರಿಲ್ 2014 (13:25 IST)
PR
PR
ಕಠ್ಮಂಡು: ಮೌಂಟ್ ಎವರೆಸ್ಟ್ ಶಿಖರದ ಇತಿಹಾಸದಲ್ಲಿ ಹಿಂದೆಂದೂ ದಾಖಲಾಗದ ಅತ್ಯಂತ ಮಾರಕ ಹಿಮಪಾತ ಸಂಭವಿಸಿದ್ದು, 12 ಜನ ನೇಪಾಳಿ ಶೆರ್ಪಾ ಗೈಡ್‌ಗಳು ಮತ್ತು 7 ಜಿನರು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. 6 ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆ 6.45ರ ಸುಮಾರಿಗೆ 5800 ಮೀಟರ್ ಎತ್ತರದಲ್ಲಿ ಪಾಪ್‌ಕಾರ್ನ್ ಫೀಲ್ಡ್ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.ಗೈಡ್‌ಗಳು ಬಹುತೇಕ ಮಂದಿ ನೇಪಾಳದವರಾಗಿದ್ದು ಎವೆರೆಸ್ಟ್ ಬೇಸ್ ಕ್ಯಾಂಪ್‌ನಿಂದ ಕ್ಯಾಂಪ್ ಒಂದಕ್ಕೆ ಉಪಕರಣಗಳನ್ನು ಸಾಗಿಸುತ್ತಿದ್ದಾಗ 20,000 ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿತು.

ಹಿಮಪಾತ ಸಂಭವಿಸಿದಾಗ ಆಲ್ಪೈನ್ ಅಸೆಂಟ್ ಮತ್ತು ಸಮ್ಮಿತ್ ನೇಪಾಳ್ ಸೇರಿದಂತೆ 15 ಮಂದಿ ಸ್ಥಳದಲ್ಲಿ ನೆರೆದಿದ್ದಾಗ ಹಿಮಪಾತ ಬಡಿಯಿತು. ಹಿಮಾಲಯನ್ ರೆಸ್ಕ್ಯೂ ಸಂಸ್ಥೆ ಜತೆ ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಮತ್ತು ಪರ್ವತ ಗೈಡ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ