ಟೆಲಿಕಾಂ ಹಗರಣ:ಮಾಜಿ ಸಚಿವ ಸುಖ್‌ರಾಮ್‌ಗೆ 5 ವರ್ಷ ಶಿಕ್ಷೆ

ಶನಿವಾರ, 19 ನವೆಂಬರ್ 2011 (16:30 IST)
PTI
1996ರಲ್ಲಿ ನಡೆದ ಟೆಲಿಕಾಂ ಇಲಾಖೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸುಖ್‌ರಾಮ್ ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿ ಐದು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ನವದೆಹಲಿಯಲ್ಲಿನ ವಿಶೇಷ ನ್ಯಾಯಾಲಯ 15 ವರ್ಷಗಳ ನಂತರ ಸುದೀರ್ಘ ವಿಚಾರಣೆ ಬಳಿಕ ಶನಿವಾರದಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.

ಟೆಲಿಕಾಂ ಇಲಾಖೆಗೆ ಕೇಬಲ್‌ಗಳನ್ನು ಪೂರೈಸಲು ಖಾಸಗಿ ಕಂಪೆನಿಗೆ ನಿಯಮ ಉಲ್ಲಂಘಿಸಿ ಸುಖ್‌ರಾಮ್ ಗುತ್ತಿಗೆ ನೀಡಿದ್ದರು. ಅದನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರೈಸಬೇಕೇಬ ಒಪ್ಪಂದವಾಗಿತ್ತು.ಕಾನೂನು ಬದ್ಧವಾಗಿ ಪಡೆಯುವ ಮೊತ್ತದ ಜೊತೆಗೆ ಕಂಪೆನಿಗೆ ಗುತ್ತಿಗೆ ನೀಡಲು 3 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎನ್ನುವ ಆರೋಪವನ್ನು ಸುಖ್‌ರಾಮ್ ಮೇಲೆ ಹೊರಿಸಲಾಗಿತ್ತುಯ

ವಿಚಾರಣೆ ವೇಳೆ ಸುಖ್‌ರಾಮ್ ಪರ ವಕೀಲರು ಮಂಡಿಸಿದ ವಾದ ತಿರಸ್ಕರಿಸಿ ಅವರ ಕ್ರಮದಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ಹಾನಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸುಖ್‌ರಾಮ್ ವಿರುದ್ಧದ ತೀರ್ಪಿನಿಂದ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಆತಂಕ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಶಿಕ್ಷೆಯ ಭೀತಿ ಕಾಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ