ಪಾಕ್ ಉದ್ಯಮಿಗಳಿಂದ ನರೇಂದ್ರ ಮೋದಿಗೆ ಆಹ್ವಾನ

ಶನಿವಾರ, 10 ಡಿಸೆಂಬರ್ 2011 (11:40 IST)
PTI
ಪಾಕಿಸ್ತಾನದ ಉದ್ಯಮಿಗಳ ನಿಯೋಗವೊಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಗುರಾತ್ ಮತ್ತು ಪಾಕಿಸ್ತಾನದ ಮಧ್ಯೆ ವಹಿವಾಟಿನ ಬಗ್ಗೆ ಚರ್ಚೆ ನಡೆಸಿದೆ. ಶ್ರೀಘ್ರದಲ್ಲಿಯೇ ಕರಾಚಿಗೆ ಭೇಟಿ ನೀಡುವಂತೆ ಮೋದಿಯವರಿಗೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಏಷ್ಯಾ ಕಲರ್ ಕೆಮಿಕಲ್ಸ್ ಮೆಗಾ ಎಕ್ಸಿಬಿಷನ್‌ನಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕರಾಚಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ನಿಯೋಗ, ಮುಖ್ಯಮಂತ್ರಿ ಮೋದಿಯನ್ನು ಪಾಕಿಸ್ತಾನಕ್ಕ ಆಹ್ವಾನಿಸಿದೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಅಧಿಕೃತ ನಿವಾಸದಲ್ಲಿ ಕೆಸಿಸಿಐ ನಿಯೋಗದೊಂದಿಗೆ ಸೌಹಾರ್ದ ವಾತಾವರಣದಲ್ಲಿ ಸಭೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಹ್ಮದಾಬಾದ್ ಮತ್ತು ಕರಾಚಿ ನಡುವೆ ನೇರ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಪಾಕ್ ನಿಯೋಗ ಮೋದಿಯವರಿಗೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಪಾಕಿಸ್ತಾನದ ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸುವಂತೆ ಕೂಡಾ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದೆ.

ವೆಬ್ದುನಿಯಾವನ್ನು ಓದಿ