ನಮ್ಮಲ್ಲಿ ಕಪ್ಪುಹಣವಿಲ್ಲ, ಬಿಜೆಪಿ ಸಂಸದರ ಘೋಷಣೆ

ಶನಿವಾರ, 10 ಡಿಸೆಂಬರ್ 2011 (16:42 IST)
PTI
ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಠೇವಣಿ ಮಾಡಿಲ್ಲವೆಂದು ಉಭಯ ಸದನಗಳ ಬಿಜೆಪಿಯ 162 ಸಂಸದರು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾಸ್ವರಾಜ್ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿಯವರಿಗೆ ಘೋಷಣಾ ಪತ್ರಗಳನ್ನು ಸಲ್ಲಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಆಡ್ವಾಣಿಯವರ ಮನವಿಯ ಮೇರೆಗೆ ಲೋಕಸಭೆಯ 115ಬಿಜೆಪಿ ಸಂಸದರಲ್ಲಿ 112 ಸಂಸದರು ಮತ್ತು ರಾಜ್ಯಸಭೆಯ 51 ಸದಸ್ಯರಲ್ಲಿ 50 ಸದಸ್ಯರು ಘೋಷಣಾ ಪತ್ರಗಳನ್ನು ನೀಡಿದ್ದಾರೆ.

ಇಂದು ವಿಶ್ವಸಂಸ್ಥೆಯ ಭ್ರಷ್ಟಾಚಾರ ವಿರೋಧಿ ದಿನವಾಗಿದ್ದರಿಂದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಇಂದೇ ಘೋಷಣಾ ಪತ್ರಗಳನ್ನು ಸಲ್ಲಿಸುವಂತೆ ಸಂಸದರಿಗೆ ಆದೇಶಿಸಿತ್ತು.

ಬಿಜೆಪಿ ಸಂಸದರು ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಠೇವಣಿ ಮಾಡಿಲ್ಲ ಎಂದು ಘೋಷಣಾ ಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಸದರು ಕೂಡಾ ಘೋಷಣಾ ಪತ್ರಗಳನ್ನು ಸಲ್ಲಿಸಲಿ. ಅಂತಾರಾಷ್ಟ್ರೀಯ ಕಾನೂನು ಬಳಸಿಕೊಂಡು ಕಪ್ಪು ಹಣವನ್ನು ಮರಳಿ ದೇಶಕ್ಕ ತರಲು ಕೇಂದ್ರ ಸರಕಾರ ಪ್ರಯತ್ನಿಸಬೇಕು ಎಂದು ಬಿಜೆಪಿ ಮುಖಂಡ ಆಡ್ವಾಣಿ ಸಲಹೆ ನೀಡಿದ್ದಾರೆ.

ರಾಜ್ಯಸಭಾ ಸದಸ್ಯರಾದ ರಾಮ್ ಜೇಠ್ಮಲಾನಿಯವರ ಮಗಳಾದ ರಾಣಿ ಜೇಠ್ಮಲಾನಿ ಅನಾರೋಗ್ಯದಿಂದಾದಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಘೋಷಣಾ ಪತ್ರ ಸಲ್ಲಿಸಿಲ್ಲ ಎಂದು ಆಡ್ವಾಣಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ