ಸಶಕ್ತ ಲೋಕಪಾಲಕ್ಕೆ ಆಗ್ರಹಿಸಿ ಅಣ್ಣಾ ಉಪವಾಸ ಸತ್ಯಾಗ್ರಹ

ಭಾನುವಾರ, 11 ಡಿಸೆಂಬರ್ 2011 (11:06 IST)
WD
ಪ್ರಧಾನಿ ಹಾಗೂ ಸಿಬಿಐ ಲೋಕ ಪಾಲ ಮಸೂದೆ ವ್ಯಾಪ್ತಿಗೆ ಬರಬೇಕು ಎಂದು ಆಗ್ರಹಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಜಂತರ್‌ ಮಂತರ್‌ನಲ್ಲಿ ಭಾನುವಾರ ಒಂದು ದಿನದ ಸಾಂಕೇತಿಕ ಮುಷ್ಕರ ಆರಂಭಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಉಪವಾಸ ಸತ್ಯಾಗ್ರಹ ಆರಂಭಿಸುವ ಮುನ್ನ ಅಣ್ಣಾ ಹಜಾರೆ ಅವರು ರಾಜ್‌ ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ತೆರಳಿ ಪ್ರಾರ್ಥನೆ ಮಾಡಿದರು.

ಜಂತರ್‍ ಮಂತರ್‌ನಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ಅವರ ತಂಡದ ಸದಸ್ಯರಾದ ಕಿರಣ್‌ ಬೇಡಿ, ಅರವಿಂದ ಕೇಜ್ರಿವಾಲ್‌ ಹಾಗೂ ಇತರರಿದ್ದರು.

ಸಶಕ್ತ ಲೋಕ ಪಾಲ ಮಸೂದೆಗಾಗಿ ಈ ಹಿಂದೆ ಅಣ್ಣಾ ಹಜಾರೆ ಅವರು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತಲ್ಲದೇ ಸರಕಾರವು ಲೋಕಪಾಲ ಮಸೂದೆಯನ್ನು ಸಂಸತ್‌ ಅಧಿವೇಶನದಲ್ಲಿ ಮಂಡಿಸುವುದಾಗಿ ಹೇಳಿತ್ತು. ಆದರೆ ಅಣ್ಣಾ ಹಜಾರೆ ನೇತೃತ್ವದ ಸಮಿತಿ ರಚಿಸಿದ್ದ ಜನ ಲೋಕ ಪಾಲ ಮಸೂದೆ ಕರಡನ್ನು ತಿರಸ್ಕರಿಸಿದ ಸರಕಾರ ಮಂದಿಸಿರುವ ಮಸೂದೆ ಸರ್ಪಕವಾಗಿಲ್ಲ ಎಂದು ಆಪಾದಿಸಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ