ಮುಸ್ಲಿಮ್ ವೋಟ್‌ನತ್ತ ಮಾಯಾವತಿ ಕಣ್ಣು; ಚುನಾವಣೆ ಗಿಮಿಕ್

ಭಾನುವಾರ, 18 ಡಿಸೆಂಬರ್ 2011 (15:42 IST)
PTI
ಉತ್ತರ ಪ್ರದೇಶದಲ್ಲಿ ತನ್ನ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಸರತ್ತು ನಡೆಸುತ್ತಿದ್ದರೆ ಮತ್ತೊಂದೆಡೆ 2012ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾಯಾವತಿ ಈಗಾಗಲೇ ತಾಲೀಮು ಆರಂಭಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ[

ಓಬಿಸಿಯಲ್ಲಿರುವ ಶೇ.27 ಮೀಸಲಾತಿಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದ್ದು, ಇದರಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಸಂವಿಧಾನದ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಲಾಗುವುದು ಎಂದು ಭಾನುವಾರ ಘೋಷಿಸಿಸುವ ಮೂಲಕ ಮಾಯಾ ಮೇಡಂ ಮುಸ್ಲಿಮ್ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಂತಾಗಿದೆ.

ರಮಾಬಾಯ್ ಅಂಬೇಡ್ಕರ್ ಮೈದಾನದಲ್ಲಿ ಇಂದು ಬೃಹತ್ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಡಳಿತ ನಡೆಸುತ್ತಿದ್ದಾಗ ಮುಸ್ಲಿಮರಿಗೆ ಯಾವುದೇ ರೀತಿಯ ಅಧಿಕಾರವಾಗಲಿ, ಅವರ ಕೈಬಲಪಡಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುರಾದಾಬಾದ್ ಮತ್ತು ಮೀರತ್‌ನಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಗ್ಗಿಲ್ಲದೆ ಹಿಂಸಾಚಾರ ನಡೆಯುತ್ತಿತ್ತು. ಆದರೆ ಬಿಎಸ್ಪಿ ಆಡಳಿತಕ್ಕೆ ಬಂದ ಮೇಲೆ ಆ ಸ್ಥಳಗಳಲ್ಲಿ ಯಾವುದೇ ರೀತಿಯ ಅಂತಹ ಕೋಮುದಳ್ಳುರಿ ಘಟನೆ ನಡೆದಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ